ನ್ಯೂಸ್

ಆಧಾರ್​-ಪ್ಯಾನ್ ಇನ್ನೂ ಲಿಂಕ್​ ಆಗಿಲ್ವಾ?​ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ | Aadhaar PAN Link

ಮೋಹನ್​ ಶೆಟ್ಟಿ

Aadhaar PAN Link: ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್​​ ಯುಗದಲ್ಲಿ ಪ್ರಸ್ತುತ ಎಲ್ಲವೂ ಡಿಜಿಟಲ್​ ಮಯವಾಗಿ ಮಾರ್ಪಟ್ಟಿದೆ ಎಂದರೆ ಖಂಡಿತ ತಪ್ಪಾಗಲಾರದು. ಬಹುತೇಕ ಕೆಲಸಗಳು ಈಗ ಡಿಜಿಟಲ್ ಆಗಿದೆ. ಬ್ಯಾಂಕ್​, ವ್ಯಾಪಾರ-ವಹಿವಾಟು, ಸರ್ಕಾರಿ ಯೋಜನೆ, ನಿವೇಶನ ಖರೀದಿ ಸೇರಿದಂತೆ ಇನ್ನಿತರ ಅಗತ್ಯ ಕೆಲಸಗಳಿಗೆ ಆಧಾರ್ ಕಾರ್ಡ್​, ಪ್ಯಾನ್ ಕಾರ್ಡ್ ಬಹುಮುಖ್ಯ ದಾಖಲಾತಿಗಳು.

ಆಧಾರ್​-ಪ್ಯಾನ್ ಲಿಂಕ್ ಮಾಡುವುದರ ಬಗ್ಗೆ ಹಲವರಿಗೆ ಇಂದಿಗೂ ಅಷ್ಟಾಗಿ ಮಾಹಿತಿಯಿಲ್ಲ. ಲಿಂಕ್ ಮಾಡುವ ಪ್ರಕ್ರಿಯೆ ಕುರಿತು ಗೊಂದಲ ಹೊಂದಿದ್ದಾರೆ. ಅಷ್ಟಕ್ಕೂ ಜೋಡಣೆ ಪ್ರಕ್ರಿಯೆ ಹೇಗೆ? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ. ಹೊಸ ಪ್ಯಾನ್ ಕಾರ್ಡ್ ಪಡೆಯುವವರಿಗೆ ಕೇಂದ್ರ ಸರ್ಕಾರ, ಆಧಾರ್ (ಆಧಾರ್ ಪ್ಯಾನ್ ಲಿಂಕ್) ಕಡ್ಡಾಯಗೊಳಿಸಿದೆ. ಈ ಹೊಸ ನಿಯಮ ಜುಲೈ 1, 2005ರಿಂದ ಜಾರಿಯಾಗಿದೆ. ನೀವು ಹೊಸ ಪ್ಯಾನ್ ಕಾರ್ಡ್ ಪಡೆಯಲು ಬಯಸಿದ್ದಲ್ಲಿ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡುವುದು ಅನಿವಾರ್ಯ.

ಇಲ್ಲಿಯವರೆಗೆ, ಪ್ಯಾನ್ ಅರ್ಜಿಗಳಿಗೆ ಆಧಾರ್ ಸಂಖ್ಯೆ ಅಗತ್ಯವಿರಲಿಲ್ಲ. ಗುರುತಿನ ಚೀಟಿ ಮತ್ತು ಜನನ ಪ್ರಮಾಣಪತ್ರದಿಂದ ಮಾತ್ರ ಪ್ಯಾನ್ ಕಾರ್ಡ್ ಪಡೆಯಲಾಗುತ್ತಿತ್ತು. ಆದರೆ, ಈಗ ನೀವು ಹೊಸ ಪ್ಯಾನ್ ಪಡೆಯಲು ಬಯಸಿದರೆ, ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನು ಕೊಡಬೇಕು. ನಂತರ ಆಧಾರ್ ಅನ್ನು ಓಟಿಪಿ (OTP) ಮೂಲಕ ಪರಿಶೀಲಿಸಬೇಕು. ಇದಾದ ಬಳಿಕವೇ ನಿಮಗೆ ಪ್ಯಾನ್ ಕಾರ್ಡ್ ನೀಡಲಾಗುತ್ತದೆ. ಈ ಪ್ರಕ್ರಿಯೆಯು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಆನ್​ಲೈನ್​ ಪೋರ್ಟಲ್‌ನಲ್ಲಿ ಲಭ್ಯವಿದೆ.

ಆಧಾರ್‌-ಪ್ಯಾನ್ ಲಿಂಕ್ ಮಾಡುವುದು ಹೇಗೆ?

  • ಮೊದಲು, ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.
  • ಮುಖಪುಟದಲ್ಲಿರುವ 'ಲಿಂಕ್ ಆಧಾರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ (OTP) ಕಳುಹಿಸಲಾಗುತ್ತದೆ.
  • ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಸಂಖ್ಯೆಯನ್ನು ನಮೂದಿಸಿ.
  • ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ.

ನೀವು ಹಾಕಿದ ಪ್ರತಿಯೊಂದು ಮಾಹಿತಿ ಸರಿಯಾಗಿದ್ದರೆ, ನಿಮ್ಮ ಪ್ಯಾನ್ ಆಧಾರ್ ಜೊತೆ ಲಿಂಕ್ ಆಗಿರುತ್ತದೆ. ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಿಂದ ನೀವು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಎಲ್ಲಾ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಪ್ಯಾನ್ ಸೇವಾ ಕೇಂದ್ರ ಅಥವಾ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಹೋಗಿ, ಪ್ರತಿಗಳು ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ.

ಫಾರ್ಮ್ ಸಲ್ಲಿಸಿದ ನಂತರ, ನಿಮಗೊಂದು ರಶೀದಿಯನ್ನು ನೀಡಲಾಗುತ್ತದೆ. ಈ ರಶೀದಿಯ ಮೂಲಕ ನಿಮ್ಮ ಪ್ಯಾನ್ ಕಾರ್ಡ್‌ನ ಮುಂದಿನ ನಡೆಯನ್ನು ಸುಲಭವಾಗಿ ನೀವು ಕುಳಿತ ಸ್ಥಳದಿಂದಲೇ ಟ್ರ್ಯಾಕ್ ಮಾಡಬಹುದಾಗಿದೆ,(ಏಜೆನ್ಸೀಸ್).