Death Note: ತನ್ನ ತಂದೆಗೆ ಡೆತ್ನೋಟ್ ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಮದನಪಲ್ಲಿ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಪಟ್ಟಣದ ರಾಮರಾಂ ಕಾಲೋನಿಯ ನಿವಾಸಿಗಳಾದ ವೆಂಕಟ್ ಸುಧಕಾರ್ ಮತ್ತು ಸುಗುಣ ದಂಪತಿಯ ಪುತ್ರಿ ಶ್ರಾವಣಿ(21) ಮೃತೆ ಎಂದು ಗುರುತಿಸಲಾಗಿದೆ.
ದಂಪತಿಗೆ ಆಶ್ವಿನಿ, ಪ್ರಸನ್ನ ಮತ್ತು ಶ್ರಾವಣಿ ಮೂವರು ಮಕ್ಕಳಿದ್ದು, ಆಶ್ವಿನಿ ವಿವಾಹಿತೆ ಆಗಿದ್ದು, ಪ್ರಸನ್ನ ಬೆಂಗಳೂರಿನಲ್ಲಿ ಕೆಲಸ ಮಾಡತ್ತಿದ್ದಾಳೆ. ಕೊನೆಯ ಮಗಳು ಶ್ರಾವಣಿ ಪುಲಿವೆಂದಲ ಜಿಲ್ಲೆಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು.
ಶ್ರಾವಣಿ ತಾಯಿ 5 ವರ್ಷಗಳಿಂದಿಯೇ ಮೃತಪಟ್ಟಿದ್ದಾರೆ. ತಂದೆ ಸುಧಾಕರ್ ಕೈಮಗ್ಗ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಕಳೆದ 2 ದಿನಗಳಿಂದೆ ಕಾಲೇಜಿನಿಂದ ಮನೆಗೆ ಬಂದಿದ್ದ ಶ್ರಾವಣಿ ಮನೆವರೊಟ್ಟಿಗೆ ಸಂತೋಷವಾಗಿದ್ದಳು. ಆದರೆ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಡೆತ್ನೋಟು ಬರೆದಿಟ್ಟು ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಂದೆ ಸುಧಾಕರ್ ಕೊಟ್ಟ ದೂರಿನ ಮೇರಗೆ ಪ್ರಕರಣ ದಾಖಲಾಗಿದೆ.
ಡೆತ್ನೋಟ್ನಲ್ಲೇನಿದೆ?
ನಾನು ನಿಮ್ಮ ಪ್ರೀತಿಯ ಮಗಳು ಶ್ರಾವಣಿ. ನೀವು ನನ್ನ ಪ್ರೀತಿಯಿಂದ ನೋಡಿಕೊಂಡಿದ್ದೀರಿ. ನಾನು ಚೆನ್ನಾಗಿ ಓದಿ ಒಳ್ಳೆಯ ಕೆಲಸ ತಗೆದುಕೊಳ್ಳಬೇಕು ಎಂಬ ಮಹತ್ತರ ಕನಸು ಕಂಡಿದ್ದೀರಿ. ಆದರೆ, ನನಗೆ ಓದಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನಗೆ ಓದಲು ಸಾಧ್ಯವಾಗುತ್ತಿಲ್ಲ. ಮತ್ತೊಮ್ಮೆ ಹುಟ್ಟಿ ಬಂದ್ರೆ ನಿಮ್ಮ ಮಗಳಾಗಿ ಹುಟ್ಟುತ್ತೇನೆ.... ಎಂದು ಬರೆದಿದ್ದಾಳೆ.(ಏಜೆನ್ಸೀಸ್)