ನ್ಯೂಸ್

ಪ್ರೀತಿಸಿದ ಹುಡುಗ ಮರಕ್ಕೆ ನೇಣು ಹಾಕಿಕೊಂಡ ಕೆಲ ಸಮಯದಲ್ಲೇ ಯುವತಿ ಆತ್ಮಹತ್ಯೆ! | Hanged

Hanged: ತಮ್ಮ ಪ್ರೀತಿಯನ್ನು ಮನೆಯರು ಒಪ್ಪಲಿಲ್ಲ ಎಂದು ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ವರಂಗಲ್​​ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ವರ್ಗಲ್​​ ಮಂಡಲದ ಅವುಸುಲೊನಿಪಲ್ಲಿ ಗ್ರಾಮದ ನಿವಾಸಿಗಳಾದ ಕಲ್ಪನಾ(18), ಶಿವಕುಮಾರ್(21) ಮೃತರು. ಕಲ್ಪನಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಶಿವಕುಮಾರ್​ ಹಾಗೂ ಕಲ್ಪನಾ ಕೆಲ ದಿನಗಳಿಂದ ಪ್ರೀತಿಸುತ್ತಿದ್ದರು. ಇದು ಎರಡು ಮನೆಯರಿಗೆ ಗೊತ್ತಾಗಿದೆ. ಹೀಗಾಗಿ, ಮದುವೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಹಿರಿಯರು ನಿರಾಕರಿದ್ದಾರೆ. ಈ ಹಿನ್ನೆಲೆ ಶಿವಕುಮಾರ್​ ತಮ್ಮ ಜಮೀನಲ್ಲಿನ ಮರವೊಂದಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ವಿಷಯ ತಿಳಿದ ಕಲ್ಪನಾ ಕೂಡ ಮನೆಲ್ಲಿ ಫ್ಯಾನ್​ಗೆ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಗ್ರಾಮದಾದ್ಯಂತ ದುಃಖದ ಛಾಯೆ ಮೂಡಿಸಿದೆ. ಎರಡೂ ಕುಟುಂಬಗಳು ದುಃಖದಲ್ಲಿ ಮುಳುಗಿವೆ. ಮೃತರ ಕುಟುಂಬಗಳ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​)