ನ್ಯೂಸ್

ದಕ್ಷಿಣೆ ಕೊಟ್ಟು ಎಣ್ಣೆ ಬಾಟಲ್​ ಖರೀದಿ: ವ್ಯಕ್ತಿಯ ಈ ವಿಚಿತ್ರ ನಡೆ ಹಿಂದಿದೆ ಒಂದು ಸಕಾರಣ! Dakshina

Dakshina : ವ್ಯಕ್ತಿಯೊಬ್ಬ ದಕ್ಷಿಣೆ ನೀಡಿ ಎಣ್ಣೆ ಬಾಟಲ್​ ಖರೀದಿ ಮಾಡಿದ ಅಪರೂಪದ ಹಾಗೂ ಹಾಸ್ಯಮಯ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಆ ವ್ಯಕ್ತಿ ದಕ್ಷಿಣೆ ನೀಡಲು ಒಂದು ವಿಶೇಷ ಕಾರಣ ಕೂಡ ಇದೆ.

ಅಂದಹಾಗೆ, ಕೊಟ್ಟಾಯಂನ ಪೊಂಕುನ್ನಾಥ್​ನಲ್ಲಿ ಬೇವರೇಜ್​ ಶಾಪ್​ (ಪಾನೀಯ ನಿಗಮ) ನಿನ್ನೆ ಬೆಳಗ್ಗೆ ತನ್ನ ಬಾಗಿಲನ್ನು ತೆರೆಯಿತು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಬಾಟಲಿಯನ್ನು ಖರೀದಿಸಿದ ಬಳಿಕ ಶಾಪ್​ ಸಿಬ್ಬಂದಿಗೆ ದಕ್ಷಿಣೆ ನೀಡಿ ಸಂಭ್ರಮಿಸಿದರು. ವೀಳ್ಯದೆಲೆ, ಅಡಿಕೆ ಮತ್ತು ಹಣವನ್ನು ದಕ್ಷಿಣೆಯಾಗಿ ನೀಡಿದನು.

ಇದಕ್ಕೆ ಕಾರಣ ಏನಿರಬಹುದು ಅಂತ ನೋಡಿದಾಗ, ದೀರ್ಘ ಸಮಯದ ಬಳಿಕ ಎಣ್ಣೆ ಅಂಗಡಿ ಓಪನ್​ ಮಾಡಿದ ಖುಷಿಯಲ್ಲಿ ಆ ವ್ಯಕ್ತಿ ಈ ರೀತಿ ಮಾಡಿದ್ದಾನೆ. ಹೌದು, ಪೊಂಕುನ್ನಾಥ್​ನಲ್ಲಿರುವ ಬೇವರೇಜ್​ ಮಳಿಗೆಯನ್ನು ಕಳೆದ ವರ್ಷ ತಾಂತ್ರಿಕ ಕಾರಣಗಳಿಂದ ಮುಚ್ಚಲಾಗಿತ್ತು. ಸೋಮವಾರ (ಆಗಸ್ಟ್ 25) ಬೆಳಗ್ಗೆ ಮತ್ತೆ ತೆರೆಯಲಾಯಿತು. ಮಳಿಗೆ ಇರುವ ಪ್ರದೇಶದಲ್ಲಿ ವಾಸಿಸುವ ರಂಜು ಎಂಬಾತ ತನ್ನ ಸಂತೋಷವನ್ನು ವ್ಯಕ್ತಪಡಿಸಲು ಈ ವಿಭಿನ್ನವಾದ ಕ್ರಮವನ್ನು ಆಯ್ದುಕೊಂಡನು.

ಮತ್ತೆ ಓಪನ್​ ಮಾಡಿರುವ ಬೇವರೇಜ್​ ಶಾಪ್​ನಿಂದ ಮೊದಲ ಬಾಟಲಿಯನ್ನು ಖರೀದಿಸಲು ರಂಜು ಅವರು ತಮ್ಮ ಕೈಯಲ್ಲಿ ದಕ್ಷಿಣೆ ಹಿಡಿದು ಬಂದಿದ್ದರು. ಈ ಎಣ್ಣೆ ಅಂಗಡಿಯನ್ನು ಯಾವುದೇ ಕಾರಣಕ್ಕೆ ಇನ್ನು ಮುಂದೆ ಮುಚ್ಚಬಾರದು ಎಂಬುದು ರಂಜು ಅವರ ಪ್ರಾರ್ಥನೆಯಾಗಿದೆ. ಕೇವಲ ರಂಜು ಪ್ರಾರ್ಥನೆ ಮಾತ್ರವಲ್ಲ ಅನೇಕ ಸ್ಥಳೀಯ ಜನರ ಪ್ರಾರ್ಥನೆ ಕೂಡ ಆಗಿದೆ.

ಅಂದಹಾಗೆ, ಪೊಂಕುನ್ನಾಥ್ ಬೇವರೇಜ್​ ಶಾಪ್​ ಮುಚ್ಚಿದಾಗ, ಪಾಲಾ, ಎರುಮೇಲಿ ಮತ್ತು ಪಲ್ಲಿಕಥೋಡ್‌ನಿಂದ ಸಾಕಷ್ಟು ಮಂದಿ ಮದ್ಯ ಖರೀದಿಸಲು ಬಹಳ ದೂರ ಪ್ರಯಾಣಿಸುತ್ತಿದ್ದರು. ಈ ವಿಚಾರವನ್ನು ಶಾಪ್​ ಉದ್ಘಾಟನೆಯಲ್ಲಿ ಭಾಗವಹಿಸಿದ್ದವರು ಹೇಳಿದ್ದಾರೆ. ಇನ್ನು ಮುಂದೆ ಮುಚ್ಚದಂತೆ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)