ನ್ಯೂಸ್

ಕಾರು ಡಿಕ್ಕಿಯಾಗಿ ಯುವಕ ಸಾವು

ಮೈಸೂರು: ನಗರದ ಡಿ.ದೇವರಾಜ ಅರಸ್ ರಸ್ತೆಯಲ್ಲಿ ಭಾನುವಾರ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾರೆ.


ಎಚ್.ಡಿ.ಕೋಟೆ ತಾಲೂಕಿನ ಬೆಟ್ಟದಬೀಡು ಗ್ರಾಮದ ನಿವಾಸಿ, ಖಾಸಗಿ ೈನಾನ್ಸ್‌ನ ನೌಕರ ಉಲ್ಲಾಸ್ ಸಾಗರ್(27) ಮೃತರು. ಗಾಯಗೊಂಡಿರುವ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ನಿವಾಸಿ ವರ್ಷಾ(36) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.


ಉಲ್ಲಾಸ್ ಬೈಕಿನಲ್ಲಿ ಭಾನುವಾರ ನಸುಕಿನ 3.30 ಗಂಟೆ ಸುಮಾರಿನಲ್ಲಿ ದೇವರಾಜ ಅರಸು ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ದಿವಾನ್ಸ್ ರಸ್ತೆ ಕಡೆಯಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಉಲ್ಲಾಸ್ ಕೊನೆಯುಸಿರೆಳೆದಿದ್ದಾರೆ. ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.