ಕೋಲಾರ: ಅಲ್ಲೊಂದು ಮೂವತ್ತು ನಲವತ್ತು ವರ್ಷದ ಹಿಂದಿನ ಗ್ರಾಮ ಪರಿಸರ ಮೈದಳೆದಿತ್ತು. ಅದರಲ್ಲಿ ಬಗೆಬಗೆಯ ಪುಷ್ಪಗಳಿಂದ ವಾಡಿದ ಕಲಾಕೃತಿಗಳು ಕೈಬೀಸಿ ಕರೆಯುತ್ತಿದ್ದವು. ಆಧುನಿಕ ಕೃಷಿ, ಕೃಷಿ ಪರಿಕರಗಳು, ಬೆಳೆ ವಿಧಾನ, ಆಹಾರ ಪದ್ಧತಿ ರೈತ ಮತ್ತು ಸಾರ್ವಜನಿಕರಿಗೆ ತಿಳಿವಳಿಕೆ ಮತ್ತು ಮನಸ್ಸಿಗೆ ಮುದ ನೀಡಿದವು. ಈ ಅದ್ಭುತ ಲೋಕ ಸಹಸ್ರಾರು ಮಂದಿಯನ್ನು ಸೆಳೆಯಿತು.
ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದ ತೋಟಗಾರಿಕೆ ನರ್ಸರಿಯಲ್ಲಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಸಾವಯವ ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನದಲ್ಲಿ ಕುರುಡುಮಲೆ ವಿನಾಯಕ, ಪುನೀತ್‌ರಾಜಕುವಾರ್, ಜಿರಾಫೆ, ಮರಳು ಕಲಾಕೃತಿಯ ಕಾಂತಾರದ ಕೋಲ, ವೀಣೆ ಸೇರಿ ವಿವಿಧ ಕಲಾಕೃತಿಗಳು ಹೂಗಳಿಂದ ಮೈದಳೆದಿದ್ದವು.
ಮೂರು ದಿನಗಳ ಫಲಪುಷ್ಟ ಪ್ರದರ್ಶನ ಆಯೋಜಿಸಲಾಗಿದೆಯಾದರೂ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಅವರು ಶುಕ್ರವಾರ ಚಾಲನೆ ನೀಡುತ್ತಿದ್ದಂತೆ ಹಳ್ಳಿ ಸೊಬಗು ಮತ್ತು ಹೂವಿನ ಲೋಕದ ದರ್ಶನ ಪಡೆಯಲು ಜಿಲ್ಲೆಯ ವಿವಿಧೆಡೆಯಿಂದ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದು ವಿಶೇಷವಾಗಿತ್ತು.
ಈ ಕಲಾಕೃತಿಗಳಲ್ಲದೆ ಸಿರಿಧಾನ್ಯಗಳೊಂದಿಗೆ ತೆಂಗಿನ ಗರಿ ಬಳಸಿ ನಿರ್ಮಿಸಿದ್ದ ಮನೆ, ಅದರಲ್ಲಿ ಇರಿಸಿದ್ದ ರಾಗಿ ಬಿಸುವಕಲ್ಲು, ರುಬ್ಬುವ ಕಲ್ಲು ಸೇರಿ ಕೃಷಿ ಬಳಕೆ ಪರಿಕರಗಳನ್ನು ಕಣ್ತುಂಬಿಕೊಂಡ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದರು.
ಸ್ವದೇಶಿ ಮತ್ತು ವಿದೇಶಿ ತಳಿಗಳ ವಿವಿಧ ಜಾತಿಯ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ, ಜೇನು ಸಾಕಾಣಿಕೆ ಪ್ರಾತ್ಯಕ್ಷಿಕೆ, ಸಂಗೀತ ವಾದ್ಯಗಳು, ಸಿರಿಧಾನ್ಯಗಳ ಮಳಿಗೆಗಳು, ಔಷಧ ಸಸ್ಯಗಳು, ಸುಗಂಧ ದ್ರವ್ಯ ಸಸ್ಯಗಳು, ವಿವಿಧ ಜಾತಿಯ ಸಸ್ಯಗಳು, ಹುಲ್ಲು, ಟ್ರ್ಯಾಕ್ಟರ್‌ನಿಂದ ಕುಡುಗೋಲು ತನಕ ಕೃಷಿ ಪರಿಕರಗಳ ಪ್ರದರ್ಶನ ಮತ್ತು ವಾರಾಟ ಜನರನ್ನು ಆಕರ್ಷಿಸಿದವು. ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಮೇಳದಲ್ಲಿ ಮಳಿಗೆಗಳನ್ನು ಹಾಕಿ ಇಲಾಖೆಯ ಯೋಜನೆಗಳ ಕುರಿತು ಜನರಿಗೆ ವಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷಿಕೆ, ಆಧುನಿಕ ಪದ್ಧತಿಯಲ್ಲಿ ಬೆಳಗಳ ಪ್ರಾತ್ಯಕ್ಷಿಕೆ, ಹಸಿರು ಮನೆಯಲ್ಲಿ ತರಕಾರಿ ಬೆಳೆಯುವುದು, ಕೈತೋಟ ಮತ್ತು ತಾರಸಿತೋಟ, ಜೇನು ಸಾಕಣೆ ಪ್ರಾತ್ಯಕ್ಷತೆ, ಹೈಡ್ರೋಪೋನಿಕ್ಸ್ ವಾದರಿ ಪ್ರದರ್ಶನ ಪ್ರದರ್ಶನದಲ್ಲಿವೆ.
ಪ್ರದರ್ಶನದಲ್ಲಿ ತೋಟಗಾರಿಕೆ ಬೆಳೆಗಳ ಸಸ್ಯ ಸಂತೆ ಆಯೋಜಿಸಲಾಗಿದೆ. ಅದರಂತೆ ವಾವು, ಸೀಬೆ, ನೇರಳೆ, ಗೋಡಂಬಿ, ದಾಳಿಂಬೆ, ಅಂಜೂರ, ವಾಟರ್ ಆಪಲ್, ನುಗ್ಗೆ, ಕರಿಬೇವು, ಸೀತಾಫಲ, ಬೆಣ್ಣೆಹಣ್ಣು, ಬೆಟ್ಟದ ನೆಲ್ಲಿ, ನಿಂಬೆ, ಆರೆಂಜ್ ಸೇರಿದಂತೆ ಅಲಂಕಾರಿಕ ಗಿಡಗಳು, ಕೈತೋಟಕ್ಕೆ ಬೀಜದ ಕಿಟ್‌ನ್ನು ವಾರಾಟ ವಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಸಂಸದ ಎಸ್.ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಎಂ.ಎಲ್.ಅನಿಲ್‌ಕುವಾರ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್‌ಕುವಾರ್, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಪಂ ಸಿಇಒ ಎಸ್.ಯುಕೇಶ್‌ಕುವಾರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.