Saree: ಕರ್ವಾ ಚೌತ್ ಹಬ್ಬ ಹಿನ್ನೆಲೆ ನನ್ನ ಗಂಡ ನನಗೆ ಸೀರೆ ಖರೀದಿಸುತ್ತಿಲ್ಲ ಎಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಹೌದು, ಕರ್ವಾ ಚೌತ್‌ಗೆ ಹೆಂಡತಿ ತನ್ನ ಗಂಡನಿಂದ ಹೊಸ ಸೀರೆಯನ್ನು ಕೇಳಿದಾಗ, ಅವನು ನಿರಾಕರಿಸಿದನು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು ಹೀಗಾಗಿ, ಆಕೆ ಪೊಲೀಸ್ ಠಾಣೆಗೆ ಹೋಗಿ ಗಂಡನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಆದರೆ, ಇಬ್ಬರ ನಡುವೆ ಪೊಲೀಸರು ಸಮಾಲೋಚನೆ ನಡೆಸಿದ್ದಾರೆ. ಕೊನೆಗೂ ಗಂಡ ತನ್ನ ಹೆಂಡತಿಗೆ ಸೀರೆಯನ್ನು ಖರೀದಿಸಲು ಒಪ್ಪಿಕೊಂಡಿದ್ದಾನೆ. ಬಳಿಕ ಇಬ್ಬರೂ ಸಂತೋಷದಿಂದ ಮನೆಗೆ ತೆರಳಿದರು ಎಂದು ವರದಿ ಉಲ್ಲೇಖಿಸಿದ್ದಾರೆ.
ನಗರದ ನಿವಾಸಿ ಸುನಿಲ್ (ಹೆಸರು ಬದಲಾಯಿಸಲಾಗಿದೆ) ಅವರನ್ನು ಅವರ ಪತ್ನಿ ನೇಹಾ (ಹೆಸರು ಬದಲಾಯಿಸಲಾಗಿದೆ) ಕರ್ವಾ ಚೌತ್‌ಗೆ ಸೀರೆ ಖರೀದಿಸಲು ಕೇಳಿಕೊಂಡಿದ್ದಾರೆ. ಅವರ ಪತ್ನಿ ಯಾವಾಗಲೂ ಸೂಟ್‌ಗಳನ್ನು ಧರಿಸುತ್ತಿದ್ದರಿಂದ, ಪತಿ ನಿರಾಕರಿಸಿ, "ನೀವು ಸೀರೆ ಧರಿಸುವುದಿಲ್ಲ, ಹಾಗಾದರೆ ನೀವು ಅವುಗಳನ್ನು ಏಕೆ ಖರೀದಿಸುತ್ತಿದ್ದೀರಿ?" ಎಂದು ಕೇಳಿದರು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು, ಅದು ಪೊಲೀಸ್ ಠಾಣೆಯನ್ನೂ ತಲುಪಿದೆ.(ಏಜೆನ್ಸೀಸ್)