ನ್ಯೂಸ್

ಜಮೀನು ವಿವಾದ; ತೆಂಗಿನ ತೋಟದಲ್ಲಿ ಮಹಿಳೆಯ ಬಟ್ಟೆ ಹರಿದು ಥಳಿತ

ಚಿಕ್ಕಮಗಳೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಅರೋಪ ಕೇಳಿ ಬಂದಿದೆ.

ಗೋಪಾಲ ಗ್ರಾಮದ ಮಹಿಳೆ ಗಂಗಮ್ಮ ಹಲ್ಲೆಗೊಳಗಾದ ಮಹಿಳೆ. ಲೋಕೇಶ್ ‌ಹಲ್ಲೆ ಮಾಡಿದ ಆರೋಪಿ. ತರೀಕೆರೆ ತಾಲೂಕಿನ ಗೋಪಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗಂಗಮ್ಮ ಮತ್ತು ಗೋಪಾಲ ಗ್ರಾಮದ ಲೋಕೇಶ್ ನಡುವೆ ಜಮೀನು ವಿವಾದ ನಡೆಯುತ್ತಿತ್ತು. ಗಂಗಮ್ಮ ಜಮೀನಿಗಾಗಿ ಹೈ ಕೋರ್ಟ್​​​ನಲ್ಲಿ ಸ್ಟೇ ತಂದಿದ್ದರು. ಈ ವಿಚಾರವಾಗಿ ಕೋಪಗೊಂಡ ಲೋಕೇಶ್,​​ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಅಟ್ಟಾಡಿಸಿ ಹಲ್ಲೆ ಮಾಡಿದ್ದಾನೆ.

ತೆಂಗಿನ ತೋಟದಲ್ಲಿ ಮಹಿಳೆಯ ಬಟ್ಟೆ ಹರಿದು ಥಳಿಸಿದ್ದಾನೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಅಟ್ಟಾಡಿಸಿ ಹೊಡೆದ ವಿಡಿಯೋ ವೈರಲ್ ಆಗಿದೆ. ಹಲ್ಲೆ ಸಂಬಂಧ ಪರ ವಿರೋಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.