ನ್ಯೂಸ್

Bengaluru CTR Hotel ಮುಂದೆ ನಿಂತು ಝೊಮ್ಯಾಟೊದಲ್ಲಿ ಬೆಣ್ಣೆ ದೋಸೆ ಆರ್ಡರ್‌ ಮಾಡಿದ ಮಹಿಳೆ! ಕಾರಣವೇನು ಗೊತ್ತಾ?

ಬೆಂಗಳೂರು:  ( Bengaluru CTR Hotel ) ಬೆಂಗಳೂರಿನ ಐಕಾನಿಕ್‌ ಹೋಟೆಲ್​​ಗಳಲ್ಲಿ CTR  ಕೂಡಾ ಒಂದಾಗಿದೆ. ಇಲ್ಲಿ ತಮ್ಮಿಷ್ಟದ ಭಕ್ಷ್ಯ ಸವಿಯಲು ಗಂಟೆಗಟ್ಟಲೆ ಕ್ಯೂ ನಿಂತು ಕಾಯುವುದನ್ನು ತಪ್ಪಿಸಲು ಅದೇ ಹೋಟೆಲ್‌ ಮುಂದೆ ನಿಂತು ಅಲ್ಲಿಂದಲೇ ಝೊಮ್ಯಾಟೋದಲ್ಲಿ ಬೆಣ್ಣೆ ದೋಸೆ ತರಿಸಿ ಸವಿದಿದ್ದಾರಂತೆ.  ಈ ಕುರಿತಾದ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಸಾಮಾನ್ಯವಾಗಿ CTR ಮುಂದೆ ಜನ ಕ್ಯೂನಲ್ಲಿ ನಿಂತಿರ್ತಾರೆ. ಹೀಗೆ ಕಾದು ಕಾದು ಹೋಟೆಲ್‌ಗೆ ಹೋದ್ರು ಆರ್ಡರ್‌ ಮಾಡಿದ ದೋಸೆ ಬರೋದಕ್ಕೆ ಸುಮಾರು 40 ನಿಮಿಷಗಳಾದ್ರೂ ತಗುಲುತ್ತದೆ ಎಂದು ಬುದ್ಧಿವಂತಿಕೆಯನ್ನು ಉಪಯೋಗಿಸಿದ ಮಹಿಳೆಯೊಬ್ಬರು CTR ಮುಂದೆಯೇ ನಿಂತು ಝೊಮ್ಯಾಟೊದಲ್ಲಿ ಬೆಣ್ಣೆ ದೋಸೆ ಆರ್ಡರ್‌ ಮಾಡಿ ಸವಿದಿದ್ದಾರೆ. ಆರ್ಡರ್‌ ಮಾಡಿದ ಕೇವಲ 20 ನಿಮಿಷಗಳ ಒಳಗೆ ಬೆಣ್ಣೆ ದೋಸೆ ಡೆಲಿವರಿ ಆಗಿದ್ದು, ಸ್ನೇಹಿತರೊಂದಿಗೆ ಕಾರಿನಲ್ಲಿ ಕುಳಿತು ಆಕೆ ಬೆಣ್ಣೆ ದೋಸೆ ಸವಿದಿದ್ದಾರೆ.

 ಈ ಕುರಿತಾದ ಪೋಸ್ಟ್​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​  ವೈರಲ್​​ ಆಗಿದೆ.  ʼಈ ಐಡಿಯಾ ಮಸ್ತ್‌ ಆಗಿದೆ.. ನಾವು ಇದೇ ಮಾಡುತ್ತೇವೆ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.