ನ್ಯೂಸ್

ಚಿತ್ರದುರ್ಗದ ಮಹಿಳೆಯಲ್ಲಿ ಕರೊನಾ ವೈರಸ್​ ದೃಢ; ಇವರೊಂದಿಗೆ ವಿದೇಶದಿಂದ ಬಂದವರು 6ಮಂದಿ, ಮಕ್ಕಳೂ ಇದ್ದರು

ಚಿತ್ರದುರ್ಗ: ರಾಜ್ಯದಲ್ಲಿ ಒಂದೊಂದೇ ಜಿಲ್ಲೆಗಳಿಗೆ ಕಾಲಿಡುತ್ತಿರುವ ಕರೊನಾ ವೈರಸ್​ ಸದ್ಯ ಕೋಟೆ ನಾಡು ಚಿತ್ರದುರ್ಗಕ್ಕೂ ಎಂಟ್ರಿಕೊಟ್ಟಿದೆ. ವಿದೇಶದಿಂದ ಬಂದಿದ್ದ ಮಹಿಳೆಯೋರ್ವರಿಗೆ ಕರೊನಾ ದೃಢಪಟ್ಟಿದೆ.

ಮಹಿಳೆಯೊಂದಿಗೆ ವಿದೇಶದಿಂದ ಆರು ಮಂದಿ ಬಂದಿದ್ದರು. ಸದ್ಯ ಅವರೆಲ್ಲರ ರಕ್ತದ ಮಾದರಿಯನ್ನೂ ತಪಾಸಣೆಗೆ ಕಳಿಸಲಾಗಿದ್ದು, ನಾಲ್ಕು ಜನರ ವೈದ್ಯಕೀಯ ವರದಿಯಲ್ಲಿ ಕರೊನಾ ನೆಗೆಟಿವ್​ ಬಂದಿದೆ. ಇನ್ನೂ ಇಬ್ಬರ ವರದಿ ಬರಬೇಕಿದೆ.

ಮಹಿಳೆಯನ್ನು ಮನೆಯಲ್ಲೇ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಮನೆಯ ಸುತ್ತ 5ಕಿಮೀ ಅಂತರವನ್ನು ರೆಡ್​ ಝೋನ್​ ಎಂದು ಗುರುತಿಸಲಾಗಿದೆ. ಮನೆಯಿಂದ ಯಾರೂ ಹೊರಬರುವಂತಿಲ್ಲ. ರೆಡ್​ ಝೋನ್ ಒಳಗೂ ಯಾರೂ ಹೋಗುವಂತಿಲ್ಲ.

ಸೋಂಕಿತ ಮಹಿಳೆಯೊಂದಿಗೆ ಮಕ್ಕಳೂ ಕೂಡ ಇದ್ದರು. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ. (ದಿಗ್ವಿಜಯ ನ್ಯೂಸ್​)