ನ್ಯೂಸ್

ತೋಟದಲ್ಲಿ ಮರಿಗೆ ಜನ್ಮ ನೀಡಿದ ಕಾಡಾನೆ

ಸಿದ್ದಾಪುರ : ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಗುಂಪಿನಲ್ಲಿದ್ದ ಹೆಣ್ಣಾನೆಯೊಂದು ಮರಿಯಾನೆಗೆ ಇತ್ತೀಚೆಗೆ ಜನ್ಮ ನೀಡಿದೆ.

ಕಾಡಾನೆಯು ಕಾಫಿ ತೋಟದೊಳಗೆ ಮರಿ ಹಾಕುವ ಸಂದರ್ಭ ಅದರ ಸುತ್ತಲೂ 12ಕ್ಕೂ ಅಧಿಕ ಕಾಡಾನೆಗಳು ಕಾವಲು ನಿಂತಿದ್ದವು ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡಾನೆಯು ಮರಿಗೆ ಜನ್ಮ ನೀಡಿರುವ ಬಗ್ಗೆ ಕಾಫಿ ತೋಟದ ಮಾಲೀಕರು ಮಾಹಿತಿ ನೀಡಿದರು. ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿಗಳಿಗೆ ಜನ್ಮ ನೀಡುತ್ತಿದ್ದು ಇಂತಹ ಕಾಡಾನೆಗಳು ಮರಿ ಆನೆಗಳನ್ನು ಬಿಟ್ಟು ಕಾಫಿ ತೋಟಗಳಿಂದ ಕದಲುತ್ತಿಲ್ಲ. ಇದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದಿರುವ ಕಾಡಾನೆಗಳು ಕಾಫಿ ತೋಟಗಳನ್ನೇ ವಾಸಸ್ಥಾನವಾಗಿ ಮಾರ್ಪಾಡು ಮಾಡಿಕೊಂಡಿದೆ.