ನ್ಯೂಸ್

ಸರ್ಕಾರಿ ಶಾಲೆ ಶೌಚಗೃಹದಲ್ಲಿ ಯುವಕ ನೇಣಿಗೆ ಶರಣು! ಸಾವಿಗೂ ಮುನ್ನ ಮನದ ನೋವನ್ನು ಗೋಡೆ ಮೇಲೆ ಅಕ್ಷರಕ್ಕಿಳಿಸಿದ

arunakunigal

ದಾವಣಗೆರೆ: ಹರಿಹರದ ಹಳ್ಳದಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಗೃಹದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಗೋಡೆ ಮೇಲೆ ಕಾರಣವನ್ನೂ ಬರೆದಿದ್ದಾನೆ.

ಹರಿಹರ ನಗರದ ಅಗಸರ ಬೀದಿ ನಿವಾಸಿ ಮಾರುತಿ (30) ಮೃತ ದುರ್ದೈವಿ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಗೋಡೆ ಮೇಲೆ 'ವಾರದ ಬಡ್ಡಿ'‌ ಎಂದು ಬರೆದಿದ್ದಾನೆ. ಬಡ್ಡಿ ದಂಧೆಗೆ ಬ್ರೇಕ್​ ಹಾಕಲು ಸರ್ಕಾರ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಬಡ್ಡಿ ದಂಧೆ ಬಡವರ ಜೀವ ಹಿಂಡುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ಹರಿಹರದಲ್ಲಿ ವಾರದ ಬಡ್ಡಿ ಹಾವಳಿ‌ ಹೆಚ್ಚಾಗಿದ್ದು, ಹೆಚ್ಚಿನ ಬಡ್ಡಿಗೆ ಸಾಲ ಪಡೆದು ತೀರಿಸಲಾಗದೆ ಹಲವರು ಪರದಾಡುತ್ತಿದ್ದಾರೆ. ವಾರದ ಬಡ್ಡಿಗೆ ಸಾಲ ನೀಡುವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಹರಿಹರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.