ನ್ಯೂಸ್

ಹೊಟ್ಟೆಯಲ್ಲಿ ಟ್ವಿನ್ಸ್ ಮಕ್ಕಳಿರುವಾಗಲೇ ಮತ್ತೊಮ್ಮೆ ಗರ್ಭ ಧರಿಸಿದ ಮಹಿಳೆ! ಅನುಭವ ಹಂಚಿಕೊಂಡ ಗರ್ಭಿಣಿ

ವಾಷಿಂಗ್ಟನ್​: ಮಹಿಳೆಯ ಹೊಟ್ಟೆಯಲ್ಲಿ ಟ್ವಿನ್ಸ್​ ಮಕ್ಕಳು ಬೆಳೆಯುತ್ತಿರುವಾಗ ಮೂರನೇ ಮಗುವಿಗೆ ಗರ್ಭ ಧರಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಈ ಮಹಿಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ.

ಟಿಕ್​ಟಾಕ್​ನಲ್ಲಿ ಪ್ರಸಿದ್ಧಿ ಪಡೆದರುವ ಮಹಿಳೆಯೊಬ್ಬಳು ಈ ರೀತಿ ಎರಡೆರೆಡು ಬಾರಿ ಗರ್ಭ ಧರಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಆಕೆ ಗರ್ಭವತಿ ಆದಾಗ ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿರುವುದಾಗಿ ವೈದ್ಯರು ತಿಳಿಸಿದ್ದರಂತೆ. ಅದಾದ 10 ದಿನಗಳಲ್ಲಿ ಸ್ಕ್ಯಾನ್​ ಮಾಡಿಸಿದಾಗ ಮತ್ತೊಂದು ಮಗು ಕಾಣಿಸಿಕೊಂಡಿದೆ. ಮೊದಲ ಎರಡು ಮಕ್ಕಳು ರೂಪ ತಾಳಿದ ಹತ್ತೇ ದಿನಗಳಲ್ಲಿ ಮೂರನೇ ಮಗು ರೂಪ ತಾಳಿದೆ. ಅದನ್ನು ಆಕೆ ಟಿಕ್​​ಟಾಕ್​ನಲ್ಲಿ ಹೇಳಿಕೊಂಡಿದ್ದಾರೆ.

ಈ ರೀತಿ ಪ್ರಕರಣಗಳು ಅತ್ಯಂತ ವಿರಳ. ಇದೀಗ ನಾನು ಅದಕ್ಕೆ ಸಾಕ್ಷಿಯಾಗಲಿದ್ದೇನೆ. ಇದು ನನ್ನ ಮೊದಲ ಮತ್ತು ಕೊನೆಯ ಗರ್ಭದಾರಣೆಯಾಗಲಿದೆ. ನಾನು ಮೂರು ಮಕ್ಕಳಿಗೆ ಜನ್ಮ ನೀಡಲಿದ್ದೇನೆ. ಮೊದಲ ಎರಡು ಮಕ್ಕಳು ಒಂದು ವಯಸ್ಸಿನವರಾದರೆ ಮೂರನೇ ಮಗು 10 ದಿನ ಚಿಕ್ಕದ್ದಾಗಲಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಮೂರೂ ಮಕ್ಕಳು ಅತ್ಯಂತ ಪೌಷ್ಠಿಕವಾಗಿ ಬೆಳೆಯುತ್ತಿವೆ. ಯಾವುದೇ ಸಮಸ್ಯೆಯಿಲ್ಲ. ಪ್ರತಿ ಎರಡು ವಾರಕ್ಕೊಮ್ಮೆ ವೈದ್ಯರು ಸ್ಕ್ಯಾನ್​ ಮಾಡಿ ಮಕ್ಕಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಆಕೆ ಹೇಳಿಕೊಂಡಿದ್ದಾರೆ. ಟಿಕ್​ಟಾಕ್​ನಲ್ಲಿ ಈಕೆ ಹಾಖಿದ ವಿಡಿಯೋವನ್ನು 50 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಚಿತ್ರ ಘಟನೆಯ ಬಗ್ಗೆ ಅನೇಕರು ಕುತೂಹಲ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)