ಶಿರಾಳಕೊಪ್ಪ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತವರಿಗೆ ಆಗಮಿಸಿದ ಅಡಗಂಟಿ ಗ್ರಾಮದ ಯೋಧ ಪ್ರವೀಣ ಅವರಿಗೆ ಶಿರಾಳಕೊಪ್ಪದಲ್ಲಿ ನಾಗರಿಕ ಸನ್ಮಾನ ಮಾಡಲಾಯಿತು.
ಪ್ರವೀಣ ಅವರು 16 ವಷರ್ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದಾರೆ. ಗುರುವಾರ ಪಟ್ಟಣದ ವಾಲ್ಮೀಕಿ ಭವನದಿಂದ ಬಸ್ ನಿಲ್ದಾಣ ವೃತ್ತದವರೆಗೆ ಮೆರವವಣಿಗೆ ಮೂಲಕ ಕರೆತರಲಾಯಿತು. ಸುತ್ತಮುತ್ತಲ ಹಲವಾರು ಗ್ರಾಮಗಳ ಯುವಕರು ಪಟಾಕಿ ಸಿಡಿಸಿ, ಹೂವು ಎರಚಿ, ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಗೌಡ, ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಸಾಮಾಜಿಕ ಕಾರ್ಯಕತರ್ ಶಿವಾನಂದ ಸ್ವಾಮಿ ಮತ್ತಿತರರು ನಾಗರಿಕರ ಪರವಾಗಿ ಸ್ವಾಗತಿಸಿದರು.
ನಾಗರಾಜ ಗೌಡ ಮಾತನಾಡಿ, ಕುಗ್ರಾಮವಾದ ಅಡಗಂಟಿಯ ಯುವಕ ಸೇನೆಯಲ್ಲಿ ಸೇವೆ ಸಲ್ಲಿಸಿ ನಮ್ಮ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಭಾರತ ಮಾತೆಯ ಸೇವೆ ಸಲ್ಲಿಸಲು ಸೇನೆಗೆ ಸೇರ್ಪಡೆಯಾಗಿ ಎಂದರೆ ಮನೆಗಳಲ್ಲಿ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಾರೆ. ಸೈನ್ಯಕ್ಕೆ ಸೇರಿಸಿ ಅಂದರೆ ಪಕ್ಕದ ಮನೆಯವರ ಕಡೆ ಬೊಟ್ಟು ತೋರಿಸುವ ನಾವು ಯುವಕರನ್ನು ಸೇನೆಗೆ ಸೇರಲು ಪ್ರೋತ್ಸಾಹಿಸಿ, ದೇಶ ಸೇವೆ ಮಾಡಲು ಕಳುಹಿಸಿಕೊಡುವ ಕಾರ್ಯ ಮಾಡಬೇಕು ಎಂದರು.
ಶಿವಾನಂದ ಸ್ವಾಮಿ ಮಾತನಾಡಿ, 50 ವಷರ್ಗಳ ಹಿಂದೆ ಸೈನ್ಯಕ್ಕೆ ಸೇರಲು ಮೀನಮೇಷ ಎಣಿಸುತ್ತಿದ್ದ ಯುವಕರು ಇಂದು ಸೈನ್ಯಕ್ಕೆ ಸೇರಲು ಉತ್ಸಾಹ ತೋರುತ್ತಿದ್ದಾರೆ. ಆಹಾರಕ್ಕೆ ರೈತ, ದೇಶಕ್ಕಾಗಿ ಸೈನಿಕ ಎಂಬ ಘೋಷಣೆಯೊಂದಿಗೆ ನಮ್ಮ ಸೈನಿಕರು ಜೈ ಜವಾನ್ ಜೈ ಕಿಸಾನ್ ಎಂದು ದೇಶ ಕಾಯುತ್ತಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ನಮ್ಮ ಸೈನಿಕರು ಪಾಕಿಸ್ತಾನವನ್ನು ಸೆದೆಬಡಿದು ದೇಶವನ್ನು ರಕ್ಷಿಸಿದ್ದು ನಮ್ಮ ಹೆಮ್ಮೆ ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ರಾಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಚೆನ್ನವೀರ ಶೆಟ್ಟಿ, ಪುರಸಭೆ ಮಾಜಿ ಸದಸ್ಯ ಮಂಜಣ್ಣ, ಪ್ರಮುಖರಾದ ಸಂತೋಷ, ರಾಘವೇಂದ್ರ, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಯುವರಾಜ್, ಚಂದ್ರಶೇಖರ ಮಂಚಾಲಿ ಇತರರಿದ್ದರು.