ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಬೇಕೆಂದು ಇನ್ನಿಲ್ಲಿದ ಕಸರತ್ತು ನಡೆಸುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮೈಸೂರಿನಲ್ಲಿ 2 ದಿನ ಕಾರ್ಯಾಗಾರ ನಡೆಸುತ್ತಿದ್ದಾರೆ. ಕಾರ್ಯಾಗಾರಕ್ಕೆ ತೆರಳುವ ಮುನ್ನ ಜೆಡಿಎಸ್ ಶಾಸಕರು ಮತ್ತು ಮುಂಬರುವ ಚುನಾವಣಾ ಅಬ್ಯರ್ಥಿಗಳೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಎಚ್ಡಿಕೆ, ಮಹತ್ವದ ಘೋಷಣೆ ಮಾಡಿದರು.
ಈ ಬಾರಿ ಜೆಡಿಎಸ್ಗೆ 30ರಿಂದ 40 ಸ್ಥಾನ ಬಂದರೆ ನಾನು ಅಧಿಕಾರದಿಂದ ದೂರ ಇರುತ್ತೇನೆ. ನಮ್ಮಲ್ಲೇ ಯಾರದರೂ ಒಬ್ಬರನ್ನು ಆ ಸ್ಥಾನದಲ್ಲಿ ಕೂರಿಸಿ ಮಾರ್ಗದರ್ಶನ ಮಾಡುತ್ತೇನೆ. 30ರಿಂ 40 ಸ್ಥಾನ ಬಂದರೂ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ ಎಂದು ಎಚ್ಡಿಕೆ ಘೋಷಿಸಿದರು.
ನನಗೆ ಈ ಬಾರಿ ಸಂಪೂರ್ಣ ಬಹುಮತ ಕೊಡಿ. ಪಂಚರತ್ನದ 5 ಯೋಜನೆಗಳನ್ನ 5 ವರ್ಷಗಳಲ್ಲಿ ಅನುಷ್ಠಾನ ಮಾಡುತ್ತೇನೆ. ಕಾರ್ಯಕ್ರಮ ಅನುಷ್ಟಾನ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಚಾಮುಂಡಿ ಸನ್ನಿಧಾನದಲ್ಲಿ ನಿಂತು ಈ ಮಾತು ಹೇಳುತ್ತಿದ್ದೇನೆ. ಪಂಚರತ್ನ ಯೋಜನೆ ಅನುಷ್ಠಾನ ಆಗಬೇಕಾದ್ರೆ ಸಮಿಶ್ರ ಸರ್ಕಾರದಿಂದ ಸಾಧ್ಯವಿಲ್ಲ. ಸಂಪೂರ್ಣ ಬಹುಮತದಿಂದ ಮಾತ್ರ ಸಾಧ್ಯ. ಈ ಕಾರಣಕ್ಕೆ ಸಮಿಶ್ರ ಸರ್ಕಾರ ಸಂದರ್ಭ ಬಂದ್ರೆ ನಾನು ಸಿಎಂ ಆಗಲ್ಲ ಎಂದರು.