ಬೆಂಗಳೂರು: ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿಯಿದೆ. ಆರೋಗ್ಯವೊಂದಿದ್ದರೆ ಆಗ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇವೆ. ಮಾಂಸಾಹಾರ, ಸಸ್ಯಹಾರ ಯಾವುದು ಸೇವನೆ ಮಾಡಬೇಕಾ ಎನ್ನುವ ಗೊಂದಲ ಹಲವರಿಗೆ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿತ್ಯವೂ ಮಾಂಸಾಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಸಸ್ಯಾಹಾರಿಯಾದರೆ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ಹೀಗಾಗಿ ಜನಸಾಮಾನ್ಯರಲ್ಲಿ ಈ ಕುರಿತಾಗಿ ಗೊಂದಲವಿದೆ.
https://twitter.com/AaladaMara/status/1826109878022148561
ವಿಡಿಯೋದಲ್ಲಿ ವೈದ್ಯ ಹೇಳಿದ್ದೇನು?: ರೋಗಿಯೊಬ್ಬರು ವೈದ್ಯರ ಬಳಿ ಬಂದಾಗ,ಡಾಕ್ಟರ್ ಮಾಂಸಹಾರ ಸೇವನೆ ತುಂಬಾ ಒಳ್ಳೆಯದ್ದಾಗಿದೆ. ಅನಾಧಿಕಾಲದಿಂದಲೂ ಮಾಂಸಹಾರ ಸೇವನೆ ಮಾಡಿಕೊಂಡು ಬಂದಿದ್ದಾರೆ. ಈಗ ತಿಂದರೆ ಏನಾಗುತ್ತದೆ? ವಿದೇಶಿಗರು ಪ್ರತಿನಿತ್ಯ ಮಾಂಸಹಾರ ಸೇವನೆ ಮಾಡುತ್ತಾರೆ ಅವರೆಲ್ಲ ಆರೋಗ್ಯವಾಗಿ ಇಲ್ವಾ? ಮಾಂಸಹಾರವನ್ನು ಹೇಗೆ ಬೇಯಿಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಎಣ್ಣೆ, ತುಪ್ಪಾ, ಮೂರು ಸಲ ತಿಂದೆ ಅಂತಾ ಹೇಳಿ ಆಹಾರ ಸೇವೆನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆದರೆ ನಾವು ಹಿತ..ಮಿತವಾಗಿ ಚೆನ್ನಾಗಿ ಬೇಯಿಸಿದ ಮಾಂಸಹಾರ ಸೇವೆನ ಮಾಡಬೇಕು. ಕೆಂಪುಮಾಂಸದಲ್ಲಿ ರೆಡಿಮೆಡ್ ಕೊಲೆಸ್ಟ್ರಾಲ್ ಇದೆ. ಬಿಳಿ ಮಾಂಸ ಕೋಳಿಮಾಂಸ, ಮೀನು ಎಲ್ಲಾ ಒಳ್ಳೆಯದು. ಮೊಟ್ಟೆಯ ಹಳದಿ ಭಾಗ ಜೀವ ಅದನ್ನು ಚೆನ್ನಾಗಿ ತಿನ್ನಬೇಕು.
ನಾನು ಸಸ್ಯಹಾರಿ ಆದ್ರೂ ಎಲ್ಲವನ್ನೂ ತಿಳಿದುಕೊಂಡು ನಿಮಗೆ ಹೇಳುತ್ತಿದ್ದೇನೆ ಎಂದು ವೈದ್ಯ ಕೊನೆಯಲ್ಲಿ ಹೇಳುತ್ತಾರೆ. ಇದನ್ನು ಕೇಳಿದ ರೋಗಿ ಇದೆ ನನಗೆ ಆಶ್ಚರ್ಯ ತಂದಿದೆ ವೈದ್ಯರೆ ಎಂದು ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿರುವ ವೈದ್ಯರು ತುಮಕೂರಿನ ಹೃದ್ರೋಗ ತಜ್ಞ ಡಾಕ್ಟರ್ ಭಾನುಪ್ರಕಾಶ್ (Dr.Bhanuprakash ) ಎಂದು ಹೇಳಲಾಗಿದೆ. ಆದರೆ ಈ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಸ್ಯಹಾರ ಆದ್ರೂ ವೈದ್ಯರು ಮಾಂಸಾಹಾ ಕುರಿತಾಗಿ ಎಷ್ಟೊಂದು ತಿಳಿದುಕೊಂಡು ರೋಗಿಗಳಿಗೆ ತಿಳಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.