ನ್ಯೂಸ್

VIDEO: ವೈರಲ್​ ಆಯ್ತು ಪ್ರಸಿದ್ಧ ರೆಸ್ಟೋರೆಂಟ್​ ಒಂದರ ಉದ್ಯೋಗಿಯ ಸ್ನಾನದ ವಿಡಿಯೋ...ಆತ ಸ್ನಾನ ಮಾಡಿದ ಜಾಗ ನೋಡಿದ್ರೆ ಶಾಕ್​ ಆಗೋದು ಗ್ಯಾರಂಟಿ

ಕೆರೆ, ಹೊಳೆ, ನದೀಲಿ ಸ್ನಾನ ಮಾಡೋದನ್ನ ಕೇಳಿದ್ದೇವೆ...ಅದಾದ ಮೇಲೆ ಸ್ನಾನದ ಕೋಣೆಯಲ್ಲಿ ದೊಡ್ಡದಾದ ಬಾತ್​ ಟಬ್​ ಇಟ್ಟು ಸ್ನಾನ ಮಾಡೋದೂ ಗೊತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡಬಾರದ ಜಾಗದಲ್ಲಿ ಸ್ನಾನ ಮಾಡಿ ಸುದ್ದಿಯಾಗಿದ್ದಾನೆ.

ಅಮೆರಿಕದ ಮಿಚಿಗನ್​ನ ವೆಂಡಿ ರೆಸ್ಟೋರಂಟ್​ನ ಕೆಲಸಗಾರನೋರ್ವ ಸ್ನಾನ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

ಮೊದಲು ವಿಡಿಯೋ ಮಾಡಿ ಟಿಕ್​ಟಾಕ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಬಳಿಕ ಅದನ್ನು ಫೇಸ್​ಬುಕ್​ನಲ್ಲಿ ಹಾಕಲಾಗಿದೆ. ವಿಡಿಯೋ ಪೋಸ್ಟ್​ ಮಾಡಿದ ಫೇಸ್​ಬುಕ್​ ಬಳಕೆದಾರ, ಯಾರೂ ಗ್ರೀನ್‌ವಿಲ್ಲೆ ವೆಂಡಿಸ್ ರೆಸ್ಟೋರೆಂಟ್​ಗೆ ಹೋಗಬೇಡಿ. ಅಲ್ಲಿನ ಉದ್ಯೋಗಿಗಳು ಅಸಹ್ಯವಾಗಿ ವರ್ತಿಸುತ್ತಾರೆ ಎಂದು ಕ್ಯಾಪ್ಷನ್ ಬರೆದಿದ್ದಾರೆ.

ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಎಂದರೆ, ರೆಸ್ಟೋರೆಂಟ್​ನ ಉದ್ಯೋಗಿಯಾಗಿರುವ ಯುವಕನೋರ್ವ ಅಡುಗೆ ಮನೆಯ ದೊಡ್ಡದಾದ ಸಿಂಕ್ (ಕೈ, ಪಾತ್ರೆಗಳನ್ನು ತೊಳೆಯುವ ಸಿಂಕ್​)ನಲ್ಲಿಯೇ ಸ್ನಾನ ಮಾಡುತ್ತಿದ್ದಾನೆ. ಆ ಸಿಂಕ್​ ತುಂಬ ಸೋಪಿನ ನೊರೆ ಇದೆ.ಅಡುಗೆ ಕೋಣೆಯಲ್ಲಿ ಇದ್ದ ಇನ್ನೊಬ್ಬಾತ ಸ್ನಾನ ಮಾಡುತ್ತಿದ್ದವನೆಡೆಗೆ ಏನನ್ನೋ ಹಾರಿಸುತ್ತಾನೆ. ಸ್ನಾನ ಮಾಡುತ್ತಿರುವ ಯುವಕ ಆ ವಸ್ತುವಿನಲ್ಲಿ ಮೈಯನ್ನು ಉಜ್ಜಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸಿಂಕ್​ನಲ್ಲಿ ಕುಳಿತಿದ್ದವ ತುಂಬ ಸಂತೋಷದಿಂದ ಸ್ನಾನ ಮಾಡುತ್ತ, ನಾನು ನನ್ನ ಜೀವನವನ್ನು ಎಂಜಾಯ್​ ಮಾಡುತ್ತಿದ್ದೇನೆ ಎನ್ನುವುದನ್ನು, ಅದಕ್ಕೆ ಪ್ರತಿಯಾಗಿ ಇನ್ನೊಬ್ಬ ನಗುವುದನ್ನು ಕೇಳಬಹುದು.

ವಿಡಿಯೋ ನೋಡಿದವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರೆಸ್ಟೋರೆಂಟ್​​ನ ಸ್ವಚ್ಛತೆಯ ನಿರ್ವಹಣೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.

ಈ ವಿಡಿಯೋ ನೋಡಿದ ಮೇಲೆ ನಿನ್ನ ತಂದೆ ತಾಯಿ ನಿನ್ನ ಬಗ್ಗೆ ತುಂಬ ಹೆಮ್ಮೆ ಪಡುತ್ತಾರೆ...ಇದೊಂದು ಅಸಹ್ಯಕರ ವರ್ತನೆ ಎಂಬಂತಹ ಆಕ್ರೋಶ ಭರಿತ ಕಾಮೆಂಟ್​ಗಳನ್ನು ನೆಟ್ಟಿಗರು ಹಾಕಿದ್ದಾರೆ. (ಏಜೆನ್ಸೀಸ್​)