ಕೀವ್: ಯುದ್ಧದಲ್ಲಿ ತೊಡಗಿದ್ದ ಯೋಧನಿಗೆ ಐಫೋನ್ ಮರುಜೀವ ನೀಡಿದೆ. ಹೌದು ತನ್ನ ಜೇಬಿನಲ್ಲಿದ್ದ ಐಫೋನ್ ಇದೀಗ ಯೋಧನನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.
ರಷ್ಯಾ ಹಾಗೂ ಯೂಕ್ರೇನ್ ನಡುವೆ ಯುದ್ಧ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಕಳೆದ ಫೆಬ್ರವರಿಯಿಂದಲೂ ಈ ದೇಶದ ಭೀಕರ ಯುದ್ಧ ನಡೆಯುತ್ತಿದ್ದು, ಸದ್ಯ ನಿಲ್ಲುವ ಲಕ್ಷಣವೇನೂ ಕಾಣುತ್ತಿಲ್ಲ. ಈ ನಡುವೆ ಸೈನಿಕರ ಹೋರಾಟವೂ ಮುಂದುವರಿದಿದೆ. ಹೀಗೆ ಯುದ್ಧದಲ್ಲಿ ತೊಡಗಿದ್ದ ಯೋಧನಿಗೆ ನೆರವಾಗಿದ್ದು ಮಾತ್ರ ಐಫೋನ್.
ಶತ್ರು ದೇಶದ ಸೈನಿಕರೊಂದಿಗೆ ಯುದ್ಧದಲ್ಲಿ ತೊಡಗಿದ್ದ ಯೂಕ್ರೇನ್ ಸೈನಿಕನ ಎದೆಗೆ ನೇರವಾಗಿ ಗುಂಡೇಟು ಬಂದು ತಲುಪಿದೆ. ಆದರೂ ಯೋಧ ಬದುಕಿದ್ದಾನೆ, ಇದಕ್ಕೆ ಕಾರಣ ಐಫೋನ್ 11ಪ್ರೊ. ಹೌದು.. ಗುಂಡೇಟಿಗೆ ಐಫೋನ್ ಛಿದ್ರವಾಗಿದೆ ಹೊರತು ಸೈನಿಕನ ದೇಹಕ್ಕೆ ಹಾನಿಯಾಗಿಲ್ಲ. ಸದ್ಯ ಈ ಐಫೋನ್ ಛಿದ್ರವಾಗಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. (ಏಜೆನ್ಸೀಸ್)