ನ್ಯೂಸ್

'ಮಹಾ' ಪತನಕ್ಕೆ ಮುನ್ನುಡಿ ಬರೆದ ರೆಬಲ್ ಶಾಸಕರು: ಏಕನಾಥ್​ ಶಿಂಧೆಯೇ ನಮ್ಮ ನಾಯಕ ಎಂದು ಠಾಕ್ರೆಗೆ ಪತ್ರ ರವಾನೆ

ಮುಂಬೈ: ಮಹಾರಷ್ಟ್ರ ಸರ್ಕಾರ ಪತನಕ್ಕೆ ಮುನ್ನುಡಿ ಬರೆದ ಬಂಡಾಯ ಶಾಸಕರು, ಏಕನಾಥ್​ ಶಿಂಧೆ ಅವರೇ ನಮ್ಮ ನಾಯಕ ಎಂದು ಘೋಷಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ನಡೆಯಲಿರುವ ಕ್ಯಾಬಿನೆಟ್​ ಸಭೆಗೆ ಎಲ್ಲ ಶಾಸಕರು ಹಾಜರಾಗಬೇಕು ಎಂದು ಉದ್ಧವ್​ ಠಾಕ್ರೆ ವಿಪ್​ ಜಾರಿ ಮಾಡುತ್ತಿದ್ದಂತೆ ಕೆರಳಿದ ಶಿಂಧೆ, 34 ರೆಬಲ್​ ಶಾಸಕರಿಂದ ಸಹಿ ಮಾಡಿಸಿ ಪತ್ರ ರವಾನಿಸಿದ್ದಾರೆ.

ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಅಧಿಕಾರ ಠಾಕ್ರೆಗೆ ಇಲ್ಲ. ವಿಪ್​ ಜಾರಿ ಮಾಡಿದ್ದು ಅಸಿಂಧು. ನನ್ನ ಬಳಿಯೂ ಶಾಸಕರಿದ್ದಾರೆ ಎಂದು ಏಕನಾಥ್​ ಶಿಂಧೆ ಆಕ್ರೋಶ ಹೊರಹಾಕಿದ್ದಾರೆ. ‘

ರೆಬಲ್​ ಶಾಸಕರನ್ನು ಸೆಳೆಯಲು ಉದ್ಧವ್​ ಠಾಕ್ರೆ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದು, ಫಲಿಸದಿದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ. ಸರ್ಕಾರ ಉಳಿಸಿಕೊಳ್ಳಲು ಕೊನೇ ಹಂತದ ಸರ್ಕಸ್​ ನಡೆಯುತ್ತಿದ್ದು, ಇಂದು ಸಂಜೆ ನಡೆಯಲಿರುವ ಕ್ಯಾಬಿನೆಟ್​ ಸಭೆಯಲ್ಲಿ ಸರ್ಕಾರದ ಭವಿಷ್ಯ ಏನೆಂದು ಗೊತ್ತಾಗಲಿದೆ.