ನ್ಯೂಸ್

ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ: ಬೆಳ್ಳಂಬೆಳಗ್ಗೆ ರಸ್ತೆಬದಿ ನೀರಿನಂತೆ ಹರಿದ ಬಿಯರ್​

ಹೊಸಪೇಟೆ: ಗುರುವಾರ ಬೆಳ್ಳಬೆಳಗ್ಗೆ ಹೊಸಪೇಟೆ ತಾಲೂಕಿನ ಗುಂಡಾ ಸಸ್ಯೋಧಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನೀರಿನಂತೆ ಬಿಯರ್​ ಹರಿದಿದೆ.

ಬಿಯರ್​ ಬಾಟಲಿಗಳನ್ನು ತುಂಬಿಕೊಂಡು ಮಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಅದರಲ್ಲಿದ್ದ ಬಿಯರ್​ ಬಾಟಲಿ​ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಲ್ಲದೆ, ಬಾಟಲಿಗಳು ಒಡೆದು ನೀರಿನಂತೆ ರಸ್ತೆಯಲ್ಲಿ ಮದ್ಯ ಹರಿಯಿತು. ಲಾರಿಯಲ್ಲಿ ಭರ್ತಿ ತುಂಬಿದ್ದ ಬಿಯರ್​ ಬಾಟಲಿಯಲ್ಲಿ ಶೇ.80 ಬಾಟಲಿ​ಗಳು ಹಾಳಾಗಿವೆ.

ಘಟನೆಯಲ್ಲಿ ಲಾರಿ ಚಾಲಕ, ಕ್ಲೀನರ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು, ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.