ನ್ಯೂಸ್

ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು

ತಿರುಚ್ಚಿ(ತಮಿಳುನಾಡು): ಪೊಂಗಲ್(ಸಂಕ್ರಾಂತಿ) ​ಹಬ್ಬದ ಪ್ರಯುಕ್ತ ತಿರುಚ್ಚಿ ಜಿಲ್ಲೆಯ ಸುರಿಯೂರಿನಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ(ಜಲ್ಲಿಕಟ್ಟು) ಸ್ಪರ್ಧೆಯಲ್ಲಿ ಹೋರಿ ತಿವಿತಕ್ಕೊಳಗಾಗಿ 17 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

ಶ್ರೀರಂಗಂನ ಮೀನಾಕ್ಷಿಸುಂದರಂ ಮೃತ ದುರ್ದೈವಿ. ಹಬ್ಬದ ಹಿನ್ನೆಲೆ ಆಯೋಜಿಸಿದ್ದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 400 ಹೋರಿಗಳು ಭಾಗವಹಿಸಿದ್ದವು. ಮೀನಾಕ್ಷಿಸುಂದರಂಗೆ ಸೇರಿದ ಹೋರಿಯೂ ಭಾಗವಹಿಸಿತ್ತು. ಬೆಳಗ್ಗೆ 8 ಗಂಟೆಕ್ಕೆ ಜಲ್ಲಿಕಟ್ಟು ಸ್ಪರ್ಧೆಗೆ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಮತ್ತು ಜಿಲ್ಲಾಧಿಕಾರಿ ಎಸ್.ಶಿವರಾಸು ಚಾಲನೆ ನೀಡಿದರು. ಬಳಿಕ ಹೋರಿ ಬೆದರಿಸುವ ಆಟ ಶುರುವಾಗಿತ್ತು. ಕ್ಷಣಾರ್ಧದಲ್ಲೇ ಮೀನಾಕ್ಷಿಸುಂದರಂಗೆ ಹೋರಿಯೊಂದು ತಿವಿದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ.