ಸಾಗರ: ನಗರದ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ 13 ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮೂವರು ಹೊಸ ಮುಖಗಳನ್ನು ಬಿಟ್ಟರೆ, ಉಳಿದವರೆಲ್ಲರೂ ಹಳಬರೇ ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ವರ್ಗದಿಂದ 12ನೇ ಬಾರಿ ನಿರ್ದೇಶಕರಾಗಿ ಗಜಾನನ ಜೋಯಿಸ್ ಗೆಲುವಿನ ನಗೆ ಬೀರಿ ದಾಖಲೆ ನಿರ್ಮಿಸಿದ್ದಾರೆ. ಉಳಿದಂತೆ ಆರ್.ಶ್ರೀನಿವಾಸ್ ಮೇಸ್ತ್ರಿ, ಕೃಷ್ಣಮೂರ್ತಿ ಭಂಡಾರಿ, ಬಿ.ದೇವೇಂದ್ರ ಭೋಜಪ್ಪ, ವಿ.ಗುರು, ವೈ.ಮೋಹನ್, ರಂಗಧೋಳ್ ವಿನಾಯಕ ರಾವ್ ಗೆಲುವು ಸಾಧಿಸಿದ್ದಾರೆ.
ಎಸ್‌ಸಿ ವಿಭಾಗದಲ್ಲಿ ನಾರಾಯಣ, ಎಸ್‌ಟಿ ಮೀಸಲಾತಿಯಲ್ಲಿ ಎಸ್.ಎಂ.ರಮೇಶ್, ಬಿಸಿಎಂಎ ವಿಭಾಗದಲ್ಲಿ ವಿ.ಶಂಕರ್, ಬಿಸಿಎಂಬಿ ವಿಭಾಗದಿಂದ ದಳವಾಯಿ ಜಿ.ಬಸಲಿಂಗಪ್ಪ, ಮಹಿಳಾ ವಿಭಾಗದಲ್ಲಿ ಮಧುಮಾಲತಿ ಕಲ್ಲಪ್ಪ, ಸರಸ್ವತಿ ನಾಗರಾಜ್ ಜಯಗಳಿಸಿದ್ದಾರೆ. 13 ನಿರ್ದೇಶಕರ ಸ್ಥಾನಕ್ಕೆ 33 ಜನ ಕಣದಲ್ಲಿದ್ದರು. ಚುನಾವಣಾಧಿಕಾರಿಯಾಗಿ ಎಚ್.ಎಸ್.ಕುಮಾರ್ ಕಾರ್ಯನಿರ್ವಹಿಸಿದರು.