ನ್ಯೂಸ್

ಸ್ಮಶಾನದಲ್ಲಿ ಗಿಡ-ಗಂಟಿ ಬೆಳೆದು ಅಂತ್ಯಕ್ರಿಯೆಗೆ ಪರದಾಟ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ತಾಲೂಕಿನ ಜಂಗಮಕೋಟೆ ಗ್ರಾಮದ ಸ್ಮಶಾನದ ಸುತ್ತಲೂ ವಿದ್ಯುತ್​ ದೀಪ ಅಳವಡಿಕೆ, ನೀರಿನ ವ್ಯವಸ್ಥೆ, ಪೂಜಾ ವಿಧಿವಿಧಾನಗಳಿಗಾಗಿ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿಗೆ ಸ್ಥಳಿಯರು ಆಗ್ರಹಿಸಿದರು.ಸ್ಮಶಾನದಲ್ಲಿ ಪಾರ್ಥೆನಿಯಂ, ಮುಳ್ಳು ಗಿಡಗಳು ದಟ್ಟವಾಗಿ ಬೆಳೆದು ನಿಂತಿವೆ. ಅಂತ್ಯಸಂಸ್ಕಾರಕ್ಕೆ ತೆರಳಲೂ ಜಾಗವಿಲ್ಲದಂತಾಗಿದೆ. ರಾತ್ರಿಯ ವೇಳೆ ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಎದುರಾದರೆ, ಮೊಬೈಲ್​ ಟಾರ್ಚ್​ ಹಿಡಿದು ನಿಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತ್ಯಸಂಸ್ಕಾರ ಮುಗಿಸಿ ಮನೆಗಳಿಗೆ ಮರಳುವಾಗ ಕುಂಟೆಗಳಲ್ಲಿ ಕೈಕಾಲು ತೊಳೆದುಕೊಂಡು ಬರುತ್ತಿದ್ದೇವು. ಆದರೀಗ ಕುಂಟೆಗಳು ಬತ್ತಿಹೋಗಿವೆ. ಸ್ಮಶಾನದಲ್ಲಿ ನೀರಿನ ವ್ಯವಸ್ಥೆ ಮಾಡಿದಲ್ಲಿ

ಅನುಕೂಲವಾಗಲಿದೆ ಎನ್ನುತಾರೆ ಗ್ರಾಮಸ್ಥರು.

ಗ್ರಾಮದಲ್ಲಿ ಯಾರಾದರೂ ಮೃತಪಟ್ಟಾಗ ಅವರ ಅಂತ್ಯಸಂಸ್ಕಾರದ ಜಾಗವನ್ನಷ್ಟೇ ಸ್ವಚ್ಛಗೊಳಿಸಿ, ಕಾರ್ಯ ಮುಗಿಸಲಾಗುತ್ತಿದೆ. ಹಳ್ಳಿಗಳ ಸ್ವಚ್ಛತೆಗೆ ಆದ್ಯತೆ ನೀಡುವಂತೆ, ಸ್ಮಶಾನಗಳಲ್ಲೂ ಕೊಂಚ ಸ್ವಚ್ಛತೆ ಕಾಪಾಡಬೇಕಿದೆ.

|ಮುನಿಯಪ್ಪ ಸ್ಥಳಿಯ ನಿವಾಸಿ

ಸ್ಮಶಾನದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಗಿಡ&ಗಂಟಿ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆಯಾದರು ಅಧಿಕಾರಿಗಳು ಗಮನಹ ಹರಿಸಿಲ್ಲ.

| ಮನೋಜ್​ ಸ್ಥಳಿಯ ನಿವಾಸಿ