ಮೂಡಿಗೆರೆಯಲ್ಲಿ ತರಬೇತಿ ಕಾರ್ಯಾಗಾರ ಕೇಂದ್ರಕ್ಕೆ ಸಹಾಯಕ ಚುನಾವಣಾಧಿಕಾರಿ ದಲ್ಜೀತ್ ಕುಮಾರ್ ಭೇಟಿ ನೀಡಿ ಅಗತ್ಯ ಸಲಹೆ ನೀಡಿದರು. ಶೈಲೇಶ್ ಎಸ್.ಪರಮಾನಂದ, ಬಸವರಾಜ್, ಹೇಮಂತ್‌ಚಂದ್ರ ಇದ್ದರು.  
ನ್ಯೂಸ್

ಪಾರದರ್ಶಕ ಚುನಾವಣೆ ಎಲ್ಲರ ಕರ್ತವ್ಯ

ಮೂಡಿಗೆರೆ: ಪಟ್ಟಣದ ಡಿಎಸ್‌ಬಿಜಿ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ ಸಂಬಂಧ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಭಾನುವಾರ ಮಾಸ್ಟರ್ ಟ್ರೈನರ್‌ಗಳಿಂದ ಒಂದನೇ ಸುತ್ತಿನ ತರಬೇತಿ ಕಾರ್ಯಾಗಾರ ನಡೆಯಿತು.
ಸಹಾಯಕ ಚುನಾವಣಾ ಅಧಿಕಾರಿ ದಲ್ಜೀತ್ ಕುಮಾರ್ ಮಾತನಾಡಿ, ಚುನಾವಣೆ ಆಯೋಗದ ನಿರ್ದೇಶನದಂತೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವುದು ನಮ್ಮೆಲ್ಲರ ಕರ್ತವ್ಯ. ಚುನಾವಣೆ ಪ್ರಕ್ರಿಯೆಯಲ್ಲಿ ಪಿಆರ್‌ಒ ಮತ್ತು ಎಪಿಆರ್‌ಒ ಪಾತ್ರ ಪ್ರಮುಖ. ಹಾಗಾಗಿ ತರಬೇತಿ ಪ್ರಯೋಜನ ಪಡೆದು ಲೋಕಸಭೆ ಚುನಾವಣೆ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕರಿಸಬೇಕೆಂದರು.
ಮಾಸ್ಟರಿಂಗ್ ಮತ್ತು ಡಿಮಾಸ್ಟರಿಂಗ್ ಕೇಂದ್ರದಲ್ಲಿ ಸಾಮಗ್ರಿ ಪಡೆಯುವುದು, ಅಣುಕು ಮತದಾನ, ಮತದಾನ ಪ್ರಾರಂಭ, ಮತದಾನ ಮುಕ್ತಾಯಗೊಳಿಸುವ ಜವಾಬ್ದಾರಿ, ಎಲ್ಲ ಪ್ರಕ್ರಿಯೆಗಳ ಅಂಕಿ-ಅಂಶಗಳನ್ನು ಚುನಾವಣಾಧಿಕಾರಿಗಳಿಗೆ ವರದಿ ನೀಡುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ಸಂಶಯವಿದ್ದರೆ ತರಬೇತಿದಾರರಿಂದ ಮಾಹಿತಿ ಪಡೆದು ಗೊಂದಲ ನಿವಾರಿಸಿಕೊಳ್ಳಬೇಕೆಂದು ತಿಳಿಸಿದರು.
ತರಬೇತಿಗೆ ಬಂದಿರುವ ಎಲ್ಲ ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ಯಾವುದೇ ಸಮಸ್ಯೆ ಬಾರದಂತೆ ಕುಡಿಯುವ ನೀರು, ಊಟ, ಶೌಚಗೃಹ ಸೇರಿದಂತೆ ವಿವಿಧ ಸೌಲಭ್ಯ ನಿರ್ವಹಿಸುವ ಬಗ್ಗೆ ಸಿಬ್ಬಂದಿಗೆ ಸೂಚಿಸಿದರು. ತಹಸೀಲ್ದಾರ್ ಶೈಲೇಶ್ ಎಸ್.ಪರಮಾನಂದ, ಬಸವರಾಜ್, ಬಿಇಒ ಹೇಮಂತ್‌ಚಂದ್ರ ಇದ್ದರು.