ಬಲರಾಂಪುರ: ಬೈಕ್ ಸವಾರನ ಪ್ರಾಣ ಉಳಿಸಲು ಹೋದ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸ್ಥಳದಲ್ಲೇ ದುರಂತ ಅಂತ್ಯಕಂಡ ಘಟನೆ ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಸಂಭವಿಸಿದೆ.
ಶುಕ್ರವಾರ ಬೆಳಗ್ಗೆ ದೇವಸ್ಥಾನಕ್ಕೆಂದು ಗೊಂಡಾದ ತಾರಾಬ್‌ಗಂಜ್ ಮೂಲದ ಒಂದೇ ಕುಟುಂಬದ 6 ಮಂದಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿ 730ರಲ್ಲಿ ಬೈಕ್ಗೆ ಡಿಕ್ಕಿ ಆಗುವುದನ್ನ ತಪ್ಪಿಸಲು ಕಾರು ಚಾಲಕ ಬ್ರೇಕ್ ಹಾಕುತ್ತಾ, ಕಾರನ್ನು ಟರ್ನ್ ಮಾಡಿದ್ದು, ನಿಯಂತ್ರಣ ತಪ್ಪಿದ ಕಾರು ರಸ್ತೆಬದಿಯ ದೊಡ್ಡ ಕೆರೆಗೆ ಪಲ್ಟಿ ಹೊಡೆದಿದೆ. ಕೂಡಲೇ ಸ್ಥಳೀಯರು ಕಾರನ್ನು ನೀರಿನಿಂದ ಹೊರ ತೆಗೆದರಾದರೂ ನೀರು ತುಂಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು, ಓರ್ವ ಮಹಿಳೆ, ಇಬ್ಬರು ಪುರುಷರು ಜಲಸಮಾಧಿಯಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.