ನ್ಯೂಸ್

ಎರಡು ಟ್ರ್ಯಾಕ್ಟರ್​ಗಳ ಹಿಂಬದಿ ಜೋಡಿಸಿ ನಡುರಸ್ತೆಯಲ್ಲೇ ಹುಚ್ಚಾಟ ಮೆರೆದ ಯುವಕರು!

arunakunigal

ಬಳ್ಳಾರಿ: ನಡುರಸ್ತೆಯಲ್ಲಿ ಎರಡು ಟ್ರ್ಯಾಕ್ಟರ್​ಗಳ ಹೈಡ್ರೋಲಿಕ್​ಗಳನ್ನು ಜಾಯಿಂಟ್ ಮಾಡಿ ಯುವಕರಿಬ್ಬರು ಬಲಾಬಲ ಪ್ರದರ್ಶನ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ.

ಇಂತಹ ಘಟನೆ ಬಳ್ಳಾರಿ ತಾಲೂಕಿನ ಕರ್ಚೇಡು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗೆದ್ದವರಿಗೆ ಒಂದು ಕಪ್ ಟೀ ಹಾಗೂ ಒಂದು ಪ್ಲೇಟ್ ಟಿಫನ್‌ ಎಂದು ಒಬ್ಬಂದವೂ ಮಾಡಿಕೊಂಡಿದ್ದರಂತೆ. ಸ್ವಲ್ಪ ಯಾಮಾರಿದ್ರೂ ಪ್ರಾಣವೇ ಹೋಗುತ್ತೆ, ಇದೆಂಥಾ ಹುಚ್ಚಾಟ ನಿಮ್ದು ಎಂದು ಸ್ಥಳೀಯರು ಟ್ರ್ಯಾಕ್ಟರ್ಸ್​ ಡ್ರೈವರ್​ಗಳಿಬ್ಬರಿಗೂ ತರಾಟೆಗೆ ತೆಗೆದುಕೊಂಡು ನಿಲ್ಲಿಸಿದ್ದಾರೆ.