ಹೈದರಾಬಾದ್: ಕಳ್ಳತನಕ್ಕೆ ಯತ್ನಿಸುತ್ತಿದ್ದ ಕಳ್ಳನೊಬ್ಬ ಆಕಸ್ಮಿಕವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಹೈದರಾಬಾದ್ನ ಮಥುರಾನಗರದಲ್ಲಿ ನಡೆದಿದೆ. ಫಾಸ್ಟ್ ಫುಡ್ ಕೇಂದ್ರದ ಬಾಗಿಲು ಮುರಿಯುವ ವೇಳೆ ಆಕಸ್ಮಿಕವಾಗಿ ಅದು ಆತನ ಮೇಲೆ ಬಿದ್ದು ಮೃತಪಟ್ಟಿದ್ದಾನೆ.
ಯಲ್ಲರೆಡ್ಡಿ ಗುಡಾದ ಫಾಸ್ಟ್ ಫುಡ್ ಕೇಂದ್ರದಲ್ಲಿ ಅಪರಿಚಿತ ವ್ಯಕ್ತಿ ಭಾನುವಾರ ಮುಂಜಾನೆ 3:30ರ ಸುಮಾರಿಗೆ ಕಳ್ಳತನಕ್ಕೆ ಯತ್ನಿಸಿದ್ದಾನೆ. ರಾಡ್ ನಿಂದ ಬಾಗಿಲು ಒಡೆಯಲು ಯತ್ನಿಸಿದ್ದಾನೆ. ಆದರೆ, ಆಕಸ್ಮಿಕವಾಗಿ ಅದು ಮೇಲೆ ಬಿದ್ದಿದ್ದರಿಂದ ಕಳ್ಳ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಳ್ಳ ಹಾರೆ ಸಹಾಯದಿಂದ ಫಾಸ್ಟ್ ಫುಡ್ ಸೆಂಟರ್ನ ಒಂದು ಬಾಗಿಲನ್ನು ತೆರೆದಿದ್ದಾನೆ. ಆದರೆ ಎರಡನೇ ಬಾಗಿಲನ್ನು ತೆರೆಯಲು ಯತ್ನಿಸಿದಾಗ ಇದ್ದಕ್ಕಿದ್ದಂತೆ ಬಾಕ್ಸ್ ಕಳ್ಳನ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳ್ಳನ ಗುರುತು ಪತ್ತೆಯಾಗಿಲ್ಲ ಎಂದು ಮಧುರಾನಗರ ಪೊಲೀಸರು ತಿಳಿಸಿದ್ದಾರೆ.
ಫಾಸ್ಟ್ ಫುಡ್ ಸೆಂಟರ್ನ ಎದುರಿನ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಘಟನೆಯ ವಿವರ ದಾಖಲಾಗಿದೆ. ಅದರ ಆಧಾರದ ಮೇಲೆ ಕಳ್ಳರ ಗುರುತು ಪತ್ತೆ ಹಚ್ಚಿ ತನಿಖೆ ನಡೆಸಲಾಗುತ್ತಿದೆ ಪೊಲೀಸರು ತಿಳಿಸಿದ್ದಾರೆ.