ನ್ಯೂಸ್

'ತಮಿಳ್​ ತಾಯ್​ ವಜುತು' ಗೀತೆ ಇನ್ನುಂದೆ ತಮಿಳುನಾಡಿನ ನಾಡಗೀತೆ

ಚೆನ್ನೈ: 'ತಮಿಳ್​ ತಾಯ್​ ವಜುತು' ಗೀತೆಯನ್ನು ತಮಿಳುನಾಡು ರಾಜ್ಯದ ನಾಡಗೀತೆಯನ್ನಾಗಿ ಸರ್ಕಾರ ಘೋಷಣೆ ಮಾಡಿದೆ.

'ತಮಿಳ್​ ತಾಯ್​ ವಜುತು' ಗೀತೆ ಇನ್ಮುಂದೆ ತಮಿಳುನಾಡಿನ ನಾಡಗೀತೆ. ರಾಜ್ಯದ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿ, ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ಇದೇ ಗೀತೆಯನ್ನು ಗಾಯನ ಮಾಡುವುದು ಕಡ್ಡಾಯ. ಹಾಗೂ ನಾಡಗೀತೆ ಗಾಯನ ವೇಳೆ ಅಂಗವಿಲಕರನ್ನು ಹೊರತುಪಡಿಸಿ ಎಲ್ಲರೂ ಎದ್ದು ನಿಂತು ಗೌರವವ ಸೂಚಿಸಬೇಕು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಶುಕ್ರವಾರ ಆದೇಶಿಸಿದ್ದಾರೆ.

ಇತ್ತೀಚಿಗೆ ಮದ್ರಾಸ್​ ಹೈಕೋರ್ಟ್​, 'ತಮಿಳ್​ ತಾಯ್​ ವಜುತು' ಗೀತೆ ಕೇವಲ ಪ್ರಾರ್ಥನಾ ಗೀತೆ. ಇದು ರಾಷ್ಟ್ರಗೀತೆಯಲ್ಲ. ಈ ಗೀತೆಯ ಗಾಯನ ವೇಳೆ ಎಲ್ಲರೂ ಎದ್ದು ನಿಲ್ಲುವ ಅಗತ್ಯ ಇಲ್ಲ ಎಂದಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ 'ತಮಿಳ್​ ತಾಯ್​ ವಜುತು' ಗೀತೆಗೆ ನಾಡಗೀತೆಯ ಸ್ಥಾನಮಾನ ನೀಡಿದೆ. ಇನ್ನು ಈ ಗೀತೆಯ ಅವಧಿ 55 ಸೆಕೆಂಡ್​ ಇದೆ. 'ತಮಿಳು ತಾಯಿ ವಜ್ತು' ಗೀತೆಯು ತಮಿಳು ತಾಯಿಯನ್ನು ಸ್ತುತಿಸುತ್ತದೆ.