ನಂಜನಗೂಡಿನ ಶ್ರೀಂಕಠೇಶ್ವರ ನಗರದ ಅಕ್ಕಮಹಾದೇವಿ ಮಹಿಳಾ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ಶಿಬಿರದಲ್ಲಿ ಚಿನ್ನಪ್ಪ, ಬಸವ ಯೋಗೀಶ್, ಕೆರೆಹುಂಡಿ ನಂಜುಂಡಸ್ವಾಮಿ, ಡಾ.ಸುಜಾತಾ ಇದ್ದರು. 
ನ್ಯೂಸ್

ಆರೋಗ್ಯವಂತ ಜನರಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ

ನಂಜನಗೂಡು: ಶ್ರೀ ಗುರು ಬಸವೇಶ್ವರ ಸೇವಾ ಟ್ರಸ್ಟ್, ರಾವ್ ಬಹಾದೂರ್ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ ಹಾಗೂ ಕೆಂಪಿಸಿದ್ದನಹುಂಡಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಶ್ರೀಂಕಠೇಶ್ವರ ನಗರದ ಅಕ್ಕಮಹಾದೇವಿ ಮಹಿಳಾ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಟ್ರಸ್ಟ್ ಅದ್ಯಕ್ಷ ಚನ್ನಪ್ಪ ಉದ್ಘಾಟಿಸಿ ಮಾತನಾಡಿ, ಇಂತಹ ಶಿಬಿರಗಳ ಉಪಯೋಗವನ್ನು ಜನರು ಪಡೆಯಬೇಕು. ಆರೋಗ್ಯವಂತ ಜನರಿಂದ ಸದೃಢ ರಾಷ್ಟ್ರ ಕಟ್ಟಲು ಸಾಧ್ಯ ಎಂದರು.

ವೈದ್ಯೆ ಡಾ.ಸುಜಾತಾ ಮಾತನಾಡಿ, ಆಯುರ್ವೇದ ಭಾರತದಲ್ಲಿ ಹಿಂದಿನ ಕಾಲದಿಂದಲೂ ಬಹಳ ಪ್ರಚಲಿತ ಪಡೆದಿದೆ. ಎಲ್ಲ ಆರೋಗ್ಯ ಸಮಸ್ಯೆಗಳನ್ನು ಆಯುರ್ವೇದದ ಜತೆ ಶುದ್ಧ ಆಹಾರ ಕ್ರಮಗಳಿಂದಲೇ ಸರಿಪಡಿಸಿಕೊಳ್ಳಬಹುದು. ಅಡುಗೆ ಮನೆಯನ್ನೇ ಔಷಧಾಲಯ ಮಾಡಿಕೊಂಡರೆ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

ಶಿಬಿರದಲ್ಲಿ ವಿದ್ಯಾರ್ಥಿನಿಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ಔಷಧಗಳನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಡಾ.ಮೌಳ್ವಿಕಾ, ಡಾ.ಪ್ರಜ್ವಲ್, ಡಾ.ದೀಪಕ್, ಆಶಾ, ಕೆಬ್ಬೇಪುರ ರಾಜು, ಜೀಮರಳ್ಳಿ ಗುರುಪ್ರಸಾದ್, ನಿವೃತ್ತ ಉಪನ್ಯಾಸಕರಾದ ಶಿವಲಿಂಗಪ್ಪ, ಬಿ.ಎಂ.ಸಿದ್ದಪ್ಪ, ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ವಿಶ್ವಬಸವ ಸೇನೆ ಅಧ್ಯಕ್ಷ ಎ.ಬಿ.ಯೋಗೀಸ್, ಟ್ರಸ್ಟ್‌ನ ಸದಸ್ಯರಾದ ಮುದ್ದಹಳ್ಳಿ ಅಶೋಕ್, ಕೆರೆಹುಂಡಿ ನಂಜುಂಡಸ್ವಾಮಿ. ಅಂಬಳೆ ಗಿರೀಶ್, ಬೋರಮ್ಮ, ಸುರೇಶ್, ಜ್ಯೋತಿ ಸುರೇಶ್, ಕಲ್ಪುರ ಮಹೇಶ್, ದೇವನೂರು ದಕ್ಷಿಣಮೂರ್ತಿ ಭಾಗವಹಿಸಿದ್ದರು.