ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿರುವ ರಾಜ್ಯ ಸರ್ಕಾರ, ಪ್ರಸಕ್ತ ಬಜೆಟ್ನಲ್ಲಿ ಇದಕ್ಕೆ ವಿಶೇಷ ಆದ್ಯತೆ ನೀಡಿದೆ. ಬೇಲೂರು, ಹಳೆಬೀಡು ಸ್ಮಾರಕಗಳನ್ನು ಯುನೆಸ್ಕೋಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಸಿಎ ಬೊಮ್ಮಾಯಿ, ವಿವಿಧ ಯೋಜನೆಗೆ ಕೋಟ್ಯಂತರ ಅನುದಾನ ಮೀಸಲಿಟ್ಟಿದ್ದಾರೆ.
- ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ ಪ್ರವಾಸಿ ವೃತ್ತ ಅಭಿವೃದ್ಧಿ
- ಜೋಗ ಜಲಪಾತ ಬಳಿ ಹೋಟೆಲ್ ಮತ್ತು ರೋಪ್ ವೇಗಾಗಿ 116 ಕೋಟಿ ರೂ. ಮೀಸಲು
- ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ 93 ಕೋಟಿ ರೂ.
- ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ
- ಪರ್ವತಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ
- ರಾಜ್ಯದ 15 ಪ್ರವಾಸಿ ತಾಣಗಳ AR/VR ತುಣುಕುಗಳನ್ನು 15 ಕೋಟಿ ರೂ. ವೆಚ್ಚದಲ್ಲಿ ಸೃಜಿಸಲು ಉದ್ದೇಶಿಸಿದ್ದು, ಪ್ರಾಯೋಗಿಕವಾಗಿ ಮೈಸೂರು ಅರಮನೆಯ ತುಣುಕು ಸೃಜಿಸುವುದು
- ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ರೋಪ್‍ವೇ ನಿರ್ಮಿಸಲು ಯೋಜನೆ
- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಾಗೂ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ದತ್ತಪೀಠ ಬೆಟ್ಟದಲ್ಲಿ ರೋಪ್‍ವೇ ನಿರ್ಮಾಣ