ನ್ಯೂಸ್

ಕರಾವಳಿಯತ್ತ ಶ್ರೀಲಂಕಾ ಉಗ್ರರು: ಕರ್ನಾಟಕ ಮತ್ತು ಕೇರಳದಲ್ಲಿ ಹೈ ಅಲರ್ಟ್‌!

ಮಂಗಳೂರು: ಶ್ರೀಲಂಕಾದ ಉಗ್ರರು ನುಸುಳಿರುವ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೇರಳದ ಕರಾವಳಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಶ್ರೀಲಂಕಾದಿಂದ 12 ಶಂಕಿತ ಉಗ್ರರು ಎರಡು ಯಾಂತ್ರೀಕೃತ ದೋಣಿಗಳಲ್ಲಿ ಕೇರಳದ ಕರಾವಳಿಗೆ ಬಂದಿರಬಹುದು ಎಂದು ಗುಪ್ತಚರ ಇಲಾಖೆ ಸೂಚನೆ ನೀಡಿದೆ.

ಈಗಾಗಲೇ ಕೇರಳದ ಆಲಪ್ಪುಝಕ್ಕೆ ಉಗ್ರರು ಶ್ರೀಲಂಕಾದಿಂದ ತಲಪಿದ್ದು, ಅಲ್ಲಿಂದ ಕರ್ನಾಟಕ ಅಥವ ಕೇರಳದ ಯಾವುದೇ ಕಡೆಗಳಿಂದ ಪಾಕಿಸ್ತಾನಕ್ಕೆ ತೆರಳುವ ಮಾಹಿತಿ ಇದೆ. ಅದಕ್ಕಾಗಿ ಕರಾವಳಿ ಕಾವಲು ಪೊಲೀಸ್‌, ಭಾರತೀಯ ತಟರಕ್ಷಣಾ ಪಡೆಗಳನ್ನು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅನುಮಾನಾಸ್ಪದ ವ್ಯಕ್ಯಿಗಳು ಅಥವಾ ಬೋಟ್ ಕಂಡುಬಂದರೆ ಪೊಲೀಸರಿಗೆ ತಿಳಿಸುವಂತೆ ಸ್ಥಳೀಯ ಮೀನುಗಾರರಿಗೆ ಸೂಚನೆಯನ್ನೂ ನೀಡಲಾಗಿದೆ.