ತುಮಕೂರು: ಪಂಜಾಬ್ನ ಪಠಾಣ್ ಕೋಟ್ನಲ್ಲಿ ಬಿಎಸ್ಎಫ್ ಯೋಧನಾಗಿ ಕೆಲಸ ನಿರ್ವಹಿಸುತ್ತಿದ್ದ ಯೋಧರೊಬ್ಬರು ಅನಾರೋಗ್ಯದಿಂದ ಹುತಾತ್ಮರಾಗಿದ್ದಾರೆ.
ಎಸ್.ಜಿ ಸುರೇಶ್ ಕುಮಾರ್ (36) ಮೃತ ಬಿಎಸ್ಎಫ್ ಯೋಧ. ಪಂಜಾಬ್ನ ಪಠಾಣ್ ಕೋಟ್ನಲ್ಲಿ ಬಿಎಸ್ ಎಫ್ ಯೋಧನಾಗಿ ಕೆಲಸ ನಿರ್ವಹಿಸುತ್ತಿದ್ದರು. ಚಂಢಿಗಡದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.
ಪತ್ನಿಯ ಎರಡನೇ ಮಗುವಿನ ಹೆರಿಗೆಗೆ ನಿಮಿತ್ತ ಊರಿಗೆ ಬಂದಿದ್ದ ಎಸ್.ಜಿ ಸುರೇಶ್ ಕುಮಾರ್, ಹೆರಿಗೆ ರಜೆ ಮುಗಿಸಿ ಇತ್ತಿಚೆಗೆ ತಮ್ಮ ಕೆಲಸಕ್ಕೆ ವಾಪಸ್ ಆಗಿದ್ದರು. ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಸುರೇಶ್ ಕುಮಾರ್ ಅವರು ಚಂಢಿಗಡ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಸಾವನ್ನಪ್ಪಿದ್ದಾರೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಶ್ರೀರಂಗಪುರ ನಿವಾಸಿಯಾಗಿದ್ದ ಎಸ್.ಜಿ ಸುರೇಶ್ ಕುಮಾರ್.ಜಯರಾಮರೆಡ್ಡಿ ಹಾಗೂ ಸುದಮ್ಮ ದಂಪತಿಯ ಹಿರಿಯ ಮಗ ಸುರೇಶ್ ಕುಮಾರ್. ಇಬ್ಬರು ಮಕ್ಕಳು, ಪತ್ನಿ ಕುಟುಂಬವನ್ನ ಅಗಲಿದ್ದಾರೆ.
ಪಾರ್ಥಿವ ಶರೀರ ಇಂದು ಮಧ್ಯರಾತ್ರಿ ಸ್ವಗ್ರಾಮಕ್ಕೆ ಆಗಮಿಸಲಿದೆ. ನಾಳೆ ಸ್ವಗ್ರಾಮದಲ್ಲಿ ಸುರೇಶ್ ಕುಮಾರ್ ರವರ ಅಂತ್ಯಕ್ರಿಯೆ ನಡೆಯಲಿದೆ.