ಸಾಂದರ್ಭಿಕ ಚಿತ್ರ 
ನ್ಯೂಸ್

ಪೊಲೀಸರಿಗೆ ತಲೆಬಿಸಿ ತಂದ ಅಶ್ಲೀಲ ವಿಡಿಯೋ ಪ್ರಕರಣ: ಶಿವಮೊಗ್ಗದಿಂದ ಉತ್ತರ ಕನ್ನಡಕ್ಕೆ ಹೋದರೂ ಸಿಕ್ಕಿಲ್ಲ...

ರಿಪ್ಪನ್‌ಪೇಟೆ(ಶಿವಮೊಗ್ಗ): ಮಹಿಳೆಯೊಬ್ಬರ ಮೊಬೈಲ್​ಗೆ ಅಪರಿಚಿತ ನಂಬರ್​ಗಳಿಂದ ಅಶ್ಲೀಲ ವಿಡಿಯೋಗಳು ಬಂದಿದೆ. ಅಷ್ಟೇ ಅಲ್ಲ ಆ ದಿನ ನಿರಂತರವಾಗಿ ಕರೆ ಮಾಡಿದ ಅಪರಿಚಿತರು ಅಸಭ್ಯವಾಗಿ ಮಾತಾಡಿ ಕಿರುಕುಳ ಕೊಟ್ಟಿದ್ದಾರೆ. ನೊಂದ ಮಹಿಳೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಅಪರಿಚಿತ ಮೊಬೈಲ್​ನ ಜಾಡು ಹಿಡಿದು ಹೊರಟ ಪೊಲೀಸರಿಗೆ ತಲೆಬಿಸಿಯಾಗಿದೆ!

ತನಿಖೆ ನಡೆಸಿದ ಪೊಲೀಸರು ಅಶ್ಲೀಲ ವಿಡಿಯೋಗಳನ್ನು ಕಳುಹಿಸಲಾದ ನಂಬರ್‌ಗಳನ್ನು ಪತ್ತೆ ಮಾಡಿದಾಗ ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳ ಹೆಸರಿನಲ್ಲಿ ಇರುವುದು ಗೊತ್ತಾಗಿದೆ.

ರಿಪ್ಪನ್​ಪೇಟೆ ಪಟ್ಟಣದ ಗವಟೂರು ಬಡಾವಣೆ ಮಹಿಳೆಯ ಮೊಬೈಲ್​ಗೆ ಮೇ 10ರಂದು ಎರಡು ಅಪರಿಚಿತ ಮೊಬೈಲ್​ ನಂಬರ್‌ನಿಂದ ಅಶ್ಲೀಲ ವಿಡಿಯೋಗಳು ಕಳುಹಿಸಿದ ದುಷ್ಕರ್ಮಿಗಳು, ನಿರಂತರವಾಗಿ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಅಶ್ಲೀಲ ವಿಡಿಯೋಗಳನ್ನು ಕಳುಹಿಸಲಾದ ನಂಬರ್‌ ಜಾಡು ಹಿಡಿದು ಹೊರಟಾಗ ಅವು ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳ ಹೆಸರಿನಲ್ಲಿ ಇರುವುದು ಗೊತ್ತಾಗಿದೆ.

ಮೂಲ ಶೋಧ ಮಾಡಿ ಅಲ್ಲಿಗೆ ತೆರಳಿದರೆ ಈ ಎರಡೂ ಮೊಬೈಲ್​ ನಂಬರನ್ನು ಆ ವಿಳಾಸದಲ್ಲಿರುವ ವ್ಯಕ್ತಿಗಳು ಉಪಯೋಗಿಸುತ್ತಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಕಿಡಿಗೇಡಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ.