ನ್ಯೂಸ್

ಹೃದಯಾಘಾತದಿಂದ ಎಎಸ್‌ಐ ಸುರೇಶ್​ ಸಾವು

ಶಿವಮೊಗ್ಗ: ನಗರದ ದೊಡ್ಡಪೇಟೆ ಠಾಣೆಯ ಎಎಸ್‌ಐ ಸುರೇಶ್(49) ಅವರು ಗುರುವಾರ ಬೆಳಗಿನಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಸುರೇಶ್ ಅವರು ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರ್ಪಡೆಯಾಗಿದ್ದರು. ಸೇವಾ ಹಿರಿತನದ ಮೇಲೆ ಎಎಸ್‌ಐಗೆ ಬಡ್ತಿ ಪಡೆದಿದ್ದರು.

ಸುರೇಶ್​ ಸರಳ ವ್ಯಕ್ತಿತ್ವ ಹೊಂದಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ಹರೀಶ್‌ಪಟೇಲ್ ಮತ್ತು ಸಿಬ್ಬಂದಿ ವರ್ಗ ಕಂಬನಿ ಮಿಡಿದಿದೆ. ಕೋಟೆ ರಸ್ತೆಯಲ್ಲಿ ಪೊಲೀಸ್ ಕ್ವಾಟ್ರರ್ಸ್‌ನಲ್ಲಿ ಇಬ್ಬರು ಪುತ್ರರು ಮತ್ತು ಪಾಲಕರೊಂದಿಗೆ ವಾಸವಾಗಿದ್ದರು.