ನ್ಯೂಸ್

ಅಲ್​-ಖೈದಾ ಹಿರಿಯ ನಾಯಕನನ್ನು ಹೊಡೆದುರುಳಿಸಿದ ಅಮೆರಿಕ ಸೇನೆ

ವಾಷಿಂಗ್​ಟನ್​: ವೈಮಾನಿಕ ದಾಳಿ ನಡೆಸಿ ಅಲ್​-ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಅಲ್​-ಮತಾರ್​ನನ್ನು ಯುಎಸ್​ ಮಿಲಿಟರಿ ಪಡೆ ಶುಕ್ರವಾರ ಕೊಂದಿದೆ.

ವಾಯುವ್ಯ ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿದ ಅಮೆರಿಕ ಸೇನೆ, ಅಲ್​-ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಅಲ್​-ಮತಾರ್​ನನ್ನು ಸಾಯಿಸಿದೆ ಎಂದು ಸೆಂಟ್ರಲ್​ ಕಮಾಂಡ್​ ವಕ್ತಾರ ಮೇಜರ್​ ಜಾನ್ ರಿಗ್ಸ್​ ಬೀ ತಿಳಿಸಿದ್ದಾರೆ.

ಸಿರಿಯಾದಲ್ಲಿ ಅಲ್-​ಖೈದಾವು ಭಯೋತ್ಪಾದಕ ಚಟುವಟಿಕೆ ನಡೆಸುತ್ತಾ ಸಾರ್ವಜನಿಕರ ಬದುಕನ್ನೇ ನರಕ ಮಾಡಲು ಹೊರಟಿದ್ದಾರೆ. ಇಡೀ ಪ್ರದೇಶವನ್ನ ಭಯೋತ್ಪಾದಕರು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಇದನ್ನ ಸಹಿಸಲ್ಲ. ತಾಯ್ನಾಡಿಗೆ ಹಾನಿ ಆಗಲು ಬಿಡಲ್ಲ. ಭಯೋತ್ಪಾದಕರನ್ನ ಮಟ್ಟ ಹಾಕಿಯೇ ತೀರುತ್ತೇವೆ. ಶುಕ್ರವಾರ MQ-9 ವಿಮಾನ ಬಳಸಿ ಆಲ್​ಖೈದಾ ಹಿರಿಯ ನಾಯಕ ಅಬ್ದುಲ್​ ಹಮೀದ್​ ಅಲ್​-ಮತಾರ್​ನನ್ನು ಕೊಲ್ಲಲಾಗಿದೆ ಎಂದು ಮೇಜರ್ ಜಾನ್ ರಿಗ್ಸ್​ ಬೀ ತಿಳಿಸಿದ್ದಾರೆ. ಆದರೆ, ಈ ದಾಳಿಯಿಂದಾದ ಇತರ ಸಾವು-ನೋವಿನ ಬಗ್ಗೆ ಮಾಹಿತಿ ನೀಡಿಲ್ಲ.