ನ್ಯೂಸ್

ಹೊಸೂರು ರಸ್ತೆ ಜಂಕ್ಷನ್‌ನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ರೌಡಿಶೀಟರ್ ಬರ್ಬರ ಹತ್ಯೆ

ಬೆಂಗಳೂರು : ಹೊಸೂರು ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ರೌಡಿ ಮೇಲೆ ದುಷ್ಕರ್ಮಿಗಳು ಮಾರಕಾಸಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಆನೇಕಲ್ ನಿವಾಸಿ ಮಹೇಶ್ ಅಲಿಯಾಸ್ ಸಿದ್ದಾಪುರ ಮಹೇಶ್ ಕೊಲೆಯಾದ ರೌಡಿ. ಶುಕ್ರವಾರ ರಾತ್ರಿ 9.30ರಲ್ಲಿ ನಗರದ ಕಡೆಯಿಂದ ಕಾರಿನಲ್ಲಿ ಹೊಸೂರು ರಸ್ತೆಯಲ್ಲಿ ಆನೇಕಲ್‌ಗೆ ಹೋಗುತ್ತಿದ್ದ.

ಬೇರೊಂದು ವಾಹನಗಳಲ್ಲಿ ಮಾರಕಾಸಗಳಿಂದ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಹೊಸೂರು ಜಂಕ್ಷನ್‌ನಲ್ಲಿ ಏಕಾಏಕಿ ಮಹೇಶ್ ಇದ್ದ ವಾಹವನ್ನು ಅಡ್ಡಗಟ್ಟಿ ಮಾರಕಾಸಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ರೌಡಿ ಪವನ್ ಕೊಲೆ ಪ್ರಕರಣದಲ್ಲಿ ಮಹೇಶ್ ಆರೋಪಿ ಆಗಿದ್ದ. ಹಳೆಯ ದ್ವೇಷಕ್ಕೆ ಕೊಲೆ ನಡೆದಿರುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.