ನ್ಯೂಸ್

ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕ ಬಲಿ

ಗದಗ: ಬಡ್ಡಿ ವ್ಯವಹಾರಕ್ಕೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಗದಗ ನಗರದ ಬೆಟಗೇರಿಯಲ್ಲಿ ನಡೆದ ಘಟನೆ.

ಮೃತ್ಯುಂಜಯ ಭರಮಗೌಡರ್ (26) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ದುರ್ದೈವಿ. ಮಾರ್ಚ್ 23 ರಂದು‌ ಬಡ್ಡಿ ಹಣಕ್ಕಾಗಿ ಯುವಕನನ್ನು ರೌಡಿ ಶೀಟರ್ ಗ್ಯಾಂಗ್ ಹಿಗ್ಗಾಮುಗ್ಗಾ  ಥಳಿಸಿದ್ದಲ್ಲದೇ, ಮೂರು ದಿನ‌ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. 29 ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ.

2 ಲಕ್ಷ ಸಾಲಕ್ಕೆ ಒಂದು ಲಕ್ಷ ಬಡ್ಡಿ ಹಣ ಕೊಡಬೇಕೆಂದು ದಂಧೆಕೋರರು ಒತ್ತಾಯಿಸಿದ್ದರು ಎನ್ನಲಾಗಿದ್ದು, ರೌಡಿ ಶೀಟರ್​ ಉಮೇಶ್​ ಸುಂಕದ, ಉದಯ ಸುಂಕದ ಮತ್ತವರ ಗುಂಪು ಜಮೀನಿಗೆ ಕರೆದೊಯ್ದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಬಳಿಕ ಉಮೇಶ್​ ಸುಂಕದ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಈ ಗುಂಪು ಬೆಟಗೇರಿ ಭಾಗದಲ್ಲಿ ವ್ಯಾಪಕ ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎಂಬ ಆರೋಪ ಮೊದಲಿನಿಂದಲೂ ಕೇಳಿಬಂದಿದೆ.