ನ್ಯೂಸ್

ನಿನ್ನಿಂದ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು.. ಎಲ್ಲವನ್ನೂ ಟಿವಿಯಲ್ಲಿ ನೋಡಿದೆ... ಮಗನ ಮಾತಿಗೆ ಕಣ್ಣೀರಿಟ್ಟ ದಿವ್ಯಾ

ಕಲಬುರಗಿ: ಅಮ್ಮಾ ನಿನ್ನಿಂದಲೇ ಇದೆಲ್ಲಾ ಆಗಿದ್ದು, ನಿನ್ನಿಂದ ನನ್ನ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು... ನಾನು ಎಲ್ಲವನ್ನೂ ಟಿವಿಯಲ್ಲಿ ನೋಡಿದ್ದೇನೆ...

ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಬಿಜೆಪಿ ದಿವ್ಯಾ ಹಾಗರಗಿ ತನ್ನ ಮಕ್ಕಳನ್ನು ನೋಡಿ ಕಣ್ಣೀರಿಟ್ಟಿದ್ದಾಳೆ. ತಾಯಿಯನ್ನು ನೋಡಲು ಭಾನುವಾರ ಸಿಐಡಿ ಕಚೇರಿ ಬಂದ ಇಬ್ಬರು ಮಕ್ಕಳು ಕೂಡ ತಾಯಿಯನ್ನು ನೋಡುತ್ತಿದ್ದಂತೆ ಕಣ್ಣೀರು ಸುರಿಸಿದರು. ಈ ವೇಳೆ 'ಅಮ್ಮಾ ನಿನ್ನಿಂದಲೇ ಇದೆಲ್ಲಾ ಆಗಿದ್ದು, ನಿನ್ನಿಂದ ನನ್ನ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು... ನಾನು ಎಲ್ಲವನ್ನೂ ಟಿವಿಯಲ್ಲಿ ನೋಡಿದ್ದೇನೆ... ' ಎಂದು ಹಾಗರಗಿ ಪುತ್ರ ಅಳುತ್ತಿದ್ದ. ಮಗನ ಮಾತಿಗೆ ದಿವ್ಯಾ ಕೂಡ ತಪ್ಪಿತಸ್ಥ ಭಾವದಿಂದ ಕಣ್ಣೀರಿಟ್ಟರು.