ನ್ಯೂಸ್

ಕರ್ನಾಟಕದ 21 ಪೊಲೀಸ್​ ಅಧಿಕಾರಿಗಳಿಗೆ ಒಲಿದ 'ರಾಷ್ಟ್ರಪತಿ ಪದಕ'

ಬೆಂಗಳೂರು: ಪೊಲೀಸ್​ ಅಧಿಕಾರಿಗಳ ಸೇವೆ ಪರಿಗಣಿಸಿ ಗಣರಾಜ್ಯೋತ್ಸವ ದಿನದಂದು ದೇಶವ್ಯಾಪಿ ಪೊಲೀಸ್​ ಅಧಿಕಾರಿಗಳಿಗೆ ಕೊಡ ಮಾಡುವ 'ರಾಷ್ಟ್ರಪತಿ ಪದಕ' ಈ ಬಾರಿ ಕರ್ನಾಟಕದ 21 ಪೊಲೀಸ್​ ಅಧಿಕಾರಿಗಳಿಗೆ ಒಲಿದಿದೆ.

ವಿಶಿಷ್ಟ ಸಾಧನೆಗೆ ನೀಡುವ 'ರಾಷ್ಟ್ರ‌ಪತಿ ವಿಶಿಷ್ಟ ಸೇವಾ ಪದಕ' ಎಡಿಜಿಪಿ ದಯಾನಂದ್ ಮತ್ತು ಎಡಿಜಿಪಿ ಹಿತೇಂದ್ರ ಅವರಿಗೆ ಒಲಿದಿದೆ. ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ, ಸಿಐಡಿ ಡಿವೈಎಸ್ಪಿ ಯಶವಂತ್‌ಕುಮಾರ್ ಸೇರಿ ಒಟ್ಟು 19 ಅಧಿಕಾರಿಗಳು ಮತ್ತು ಪೊಲೀಸ್​ ಸಿಬ್ಬಂದಿ 'ಶ್ಲಾಘನೀಯ ಸೇವಾ ಪದಕ'ಕ್ಕೆ ಆಯ್ಕೆಯಾಗಿದ್ದಾರೆ. ಪದಕ ವಿಜೇತರ ಪಟ್ಟಿ ಇಲ್ಲಿದೆ.