ನ್ಯೂಸ್

ಪ್ರಮೋದ್​ ಸಾವಂತ್​ಗೆ ಪಟ್ಟಾಭಿಷೇಕ: ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ

ಪಣಜಿ: ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್​ ಸಾವಂತ್​ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ಡಾ.ಶ್ಯಾಮಾ ಪ್ರಸಾದ್​ ಮುಖರ್ಜಿ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಬೆಳಗ್ಗೆ 11ಕ್ಕೆ ಸಿಎಂ ಆಗಿ ಸಾವಂತ್​ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ  ಸೇರಿ ದೇಶದ ವಿವಿಧ ಗಣ್ಯರು ಪಾಲ್ಗೊಂಡು ನೂತನ ಸಿಎಂಗೆ ಶುಭಕೋರಿದರು.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 20 ಸ್ಥಾನಗಳನ್ನು ಬಿಜೆಪಿ ಹೊಂದಿದೆ. ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರಮೋದ್​ ಸಾವಂತ್​ಗೆ ಗೋವಾ ಸಿಎಂ ಗಾದಿ ಒಲಿದಿದೆ.

ವಿಶ್ವಜಿತ್ ರಾಣೆ, ಮೌವಿನ್ ಗೊಡಿನ್ಹೋ, ರವಿ ನಾಯ್ಕ್, ನೀಲೇಶ್ ಕಬ್ರಾಲ್, ಸುಭಾಷ್ ಶಿರೋಡ್ಕರ್, ರೋಹನ್ ಖೌಂಟೆ, ಗೋವಿಂದ್ ಗೌಡೆ ಮತ್ತು ಅಟಾನಾಸಿಯೊ ಮೊನ್ಸೆರೆಟ್ ಅವರು ಗೋವಾದ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.