ಬೂದಿಕೋಟೆ: ಗಾಜಗ&ಬೂದಿಕೋಟೆ ಮಾರ್ಗದ ರಸ್ತೆಯು ಸಂಪೂರ್ಣ ಹದಗೆಟ್ಟು, ಮೊಣಕಾಲುದ್ದದ ಗುಂಡಿಗಳು ನಿಮಾರ್ಣವಾಗಿವೆ. ಇದರಲ್ಲಿ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದ ವಾಹನ ಸವಾರರು ಗೊಂದಲಕ್ಕೀಡಾಗಿ ಸಂಚಾರಕ್ಕೆ ಪರದಾಡುವಂತಾಗಿದೆ.
ಸರ್ಕಾರವು ರಸ್ತೆ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಖರ್ಚು ಮಾಡುತ್ತಿದೆ. ಆದರೂ ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿ ನೋಡಿದರೆ ಈ ಹಣ ಎಲ್ಲಿ ಮಾಯವಾಗುತ್ತದೆ ಎಂದು ಸಣ್ಣ ಅನುಮಾನ ಮೂಡುವುದು ಸಹಜ. ಬಹುತೇಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮರೀಚಿಕೆಯಾಗಿದೆ.
ಬಂಗಾರಪೇಟೆ&ಬೂದಿಕೋಟೆ ಮಾರ್ಗದ ಗಾಜಗ ಗೇಟ್, ಕೊಮ್ಮೇನಹಳ್ಳಿ, ಬನಹಳ್ಳಿ, ಆರನೇ ಮೈಲಿ, ಜ್ಯೋತೇನಹಳ್ಳಿ ಸೇರಿ ಹಲವೆಡೆ ರಸ್ತೆ ಸಂಪೂರ್ಣ ಕಿತ್ತು ಹೋಗಿ ಭಾರಿ ಗಾತ್ರದ ಗುಂಡಿಗಳು ನಿಮಾರ್ಣವಾಗಿವೆ. ವಾಹನ ಸವಾರರು ಜೀವ ಕೈಯಲ್ಲೇ ಹಿಡಿದು ಸಂಚರಿಸಬೇಕಿದೆ.
ತಮಿಳುನಾಡು ಸಂಪರ್ಕ ರಸ್ತೆ: ತಮಿಳುನಾಡಿನ ಕೃಷ್ಣಗಿರಿಗೆ ಸಂಪರ್ಕ ಕಲ್ಪಿಸುವುದು ಇದೇ ರಸ್ತೆಯಾದ್ದರಿಂದ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ತಮಿಳುನಾಡಿಗೆ ಸರಕು ಸಾಗಣೆ ಲಾರಿಗಳು, ಇತರ ವಾಹನಗಳು ಸಂಚರಿಸುತ್ತವೆ. ಸಂಚಾರದ ಸಮಯದಲ್ಲಿ ನ ವಾಹನಗಳು ಹಲವು ಬಾರಿ ಗುಂಡಿಯಲ್ಲಿ ಸಿಲುಕಿರುವ ಘಟನೆಗಳು ನಡೆದಿವೆ.
ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ: ಹೋಬಳಿ ಕೇಂದ್ರವಾಗಿರುವ ಬೂದಿಕೋಟೆಯಿಂದ ತಾಲೂಕು ಕೇಂದ್ರಕ್ಕೆ ಸಂಪರ್ಕ ಹೊಂದಲು ಇದೊಂದೇ ರಸ್ತೆಯಿದ್ದು, ನಿತ್ಯ ಶಾಲಾ, ಕಾಲೇಜಿನ ವಾಹನಗಳು, ಸಾರಿಗೆ ವಾಹನಗಳು, ದ್ವಿಚಕ್ರ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಅಂಗೈಲಿ ಗುಂಡಿಗೆ ಹಿಡಿದು ಹೋಗಬೇಕಾದ ಅನಿವಾರ್ಯವಿದೆ. ರಸ್ತೆ ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರ ಹೊಸ ರಸ್ತೆ ನಿರ್ಮಿಸಬೇಕು ಅಥವಾ ತಾತ್ಕಾಲಿಕವಾಗಿ ರಸ್ತೆ ಗುಂಡಿ ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಂಗಾರಪೇಟೆ&ಬೂದಿಕೋಟೆ ಮಾರ್ಗದ ರಸ್ತೆ ಅಭಿವೃದ್ಧಿಗೊಳಿಸಿ ಹಲವು ವರ್ಷ ಕಳೆದಿದೆ. ಗಾಜಗ ಗೇಟ್ ನಿಂದ ಬೂದಿಕೋಟೆವರೆಗೂ ರಸ್ತೆ ಹದಗೆಟ್ಟಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ವಾಹನ ಸಂಚಾರ ಕಷ್ಟಕರವಾಗಿದೆ. ಈ ಮಾರ್ಗದಲ್ಲಿ ಅಪಘಾತಗಳು ನಡೆಯುವುದು ಸಾಮಾನ್ಯವಾಗಿವೆ. > ಸುರೇಶ್, ಕೊಮ್ಮೇನಹಳ್ಳಿ ಗಾಜಗ ಗೇಟ್ನಿಂದ ಬೂದಿಕೋಟೆವರೆಗಿನ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ರಸ್ತೆ ಅಭಿವೃದ್ಧಿಗೊಳಿಸಲಾಗುವುದು. ತಾತ್ಕಾಲಿಕವಾಗಿ ರಸ್ತೆಗೆ ಪ್ಯಾಚ್ ಹಾಕಲು 4 ಲಕ್ಷ ರೂ. ವೆಚ್ಚದ ಟೆಂಡರ್ ಕರೆಯಲಾಗಿದ್ದು, ಒಂದು ವಾರದಲ್ಲಿ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗುವುದು. > ಚಂದ್ರಯ್ಯ, ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬಂಗಾರಪೇಟೆ. ಅಧಿಕಾರಿಗಳ ನಿರ್ಲಕ್ಷ್ಯ, ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿಹದಗೆಟ್ಟಿರುವ ಸೋಮಯಾಜಲ ಹಳ್ಳಿಯಿಂದ ಪುಲಗೂರಕೋಟೆ ಸಂಪರ್ಕಕಲ್ಪಿಸುವ ರಸ್ತೆಯನ್ನು ಸ್ವಯಂ ಪ್ರೇರಿತರಾಗಿ ಪೆಗಳಪಲ್ಲಿ ಗ್ರಾಮಸ್ಥರು ದುರಸ್ತಿಪಡಿಸಿದರು. ಶ್ರೀನಿವಾಸಪುರ: ಸೋಮಯಾಜಲಹಳ್ಳಿಯಿಂದ ಪುಲಗೂರಕೋಟೆಯವರೆಗಿನ ಸಂಪರ್ಕ ರಸ್ತೆ ದುರಸ್ತಿಗೆ ಪಿಡಬ್ಲೂ$್ಯಡಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಇದೀಗ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಗುಂಡಿ ಮುಚ್ಚಿದ್ದಾರೆ.ಮಂಗಳವಾರದ ಜಡಿ ಮಳೆಯಲ್ಲಿಯೂ ಪೆಗಳಪಲ್ಲಿ ಗ್ರಾಮಸ್ಥರು ಗುಂಡಿಗಳಿಗೆ ಜೆಸಿಬಿ ಮುಖಾಂತರ ಮಣ್ಣು ಹಾಕಿ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ರಸ್ತೆ ಹದಗೆಟ್ಟಿದ್ದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಹಲವು ಬಾರಿ ರಸ್ತೆ ಅಪಘಾತಗಳು ಸಂಭವಿಸಿದ್ದವು. ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು. ಈ ಬಗ್ಗೆ ಹಲವು ಬಾರಿ ಪಿಡಬ್ಲೂ$್ಯಡಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಇದನ್ನು ಮನಗಂಡ ಗ್ರಾಮಸ್ಥರು, ವಿದ್ಯಾರ್ಥಿಗಳ ಪಾಲಕರು ಗ್ರಾಮದಲ್ಲಿ 10 ರಿಂದ 100 ರೂಪಾಯಿವರೆಗೆ ದೇಣಿಗೆ ಸಂಗ್ರಹ ಮಾಡಿ ದುರಸ್ತಿ ಮಾಡಿದ್ದಾರೆ. ಮಳೆಯನ್ನೂ ಲೆಕ್ಕಿಸದೆ ರಸ್ತೆ ಬದಿಯ ಗಿಡಗಳನ್ನು ಸ್ವಚ್ಛಗೊಳಿಸಿ ಹದಗೆಟ್ಟಿರುವ ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚಲಾಗಿದೆ.ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಬೇಸತ್ತ ಗ್ರಾಮಸ್ಥರು ಸ್ವತ@ ತಾವೇ ರಸ್ತೆ ದುರಸ್ತಿಗೆ ಮುಂದಾಗಿರುವುದು ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ.
loss-of-mangoes-from-mandause-15-to-20-percent-yield-loss-demand-for-crop