ನವದೆಹಲಿ: ಸದ್ಯ ಈಗ ಜಗತ್ತಿನಾದ್ಯಂತ ಇರುವ ಕುತೂಹಲ ಒಂದೇ.. ಅದು ಕರೊನಾ ಲಸಿಕೆ ಕುರಿತಾದದ್ದು. ಕೋವಿಡ್ 19 ವ್ಯಾಕ್ಸಿನ್ ಯಾರು ಕಂಡು ಹಿಡಿಯುತ್ತಾರೆ, ಯಾವಾಗ ಕಂಡು ಹಿಡಿಯುತ್ತಾರೆ ಎಂಬುದನ್ನು ಜಗತ್ತೇ ಕೌತುಕದಿಂದ ನೋಡುತ್ತಿದೆ.
ಅದಕ್ಕೆ ಪೂರಕವಾಗಿ ಭಾರತವೂ ಸೇರಿ ಜಗತ್ತಿನ ಹಲವೆಡೆ ಆ ಕುರಿತ ಸಂಶೋಧನೆಗಳು, ಟ್ರಯಲ್ಗಳು ಕೂಡ ನಡೆಯುತ್ತಿವೆ. ಕರೊನಾ ಲಸಿಕೆ ಸಂಶೋಧನೆ ಸಂಬಂಧದ ಬೆಳವಣಿಗೆಗಳನ್ನು ಜನರು ಬಹಳ ನಿರೀಕ್ಷೆಯಿಂದ ಗಮನಿಸುತ್ತಿದ್ದಾರೆ. ಹೀಗಾಗಿ ಅದನ್ನು ಜನರಿಗೆ ನೀಡಬೇಕಾದ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿ ಕರೊನಾ ಲಸಿಕೆ ಕುರಿತ ಎಲ್ಲ ಮಾಹಿತಿ, ಅಪ್ಡೇಟ್ಗಳನ್ನು ಒಳಗೊಂಡ ಪೋರ್ಟಲ್ವೊಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ದೇಶದಲ್ಲಿ ಮಾತ್ರವಲ್ಲ ಜಾಗತಿಕವಾಗಿ ನಡೆಯುತ್ತಿರುವ ಕರೊನಾ ಲಸಿಕೆ ಕುರಿತ ಎಲ್ಲ ಮಾಹಿತಿ ನಿಯಮಿತವಾಗಿ ಈ ವೆಬ್ಸೈಟ್ನಲ್ಲಿ ಲಭಿಸಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಪೋರ್ಟಲ್ ವಿಳಾಸ ಹೀಗಿದೆ.. https://vaccine.icmr.org.in