ಬೆಂಗಳೂರು: ಪಾದರಾಯನಪುರದಲ್ಲಿ ಕರೊನಾ ವಾರಿಯರ್ಸ್ ಮೇಲಿನ ಗೂಂಡಾಗಿರಿ ಹೊಸ ತಿರುವು ಪಡೆದಿದ್ದು, ರಾಜಕೀಯ ಮುಖಂಡರ ಒಳಜಗಳ ಗಲಭೆಗೆ ಕಾರಣವೆಂಬ ಅನುಮಾನ ಪೊಲೀಸರ ತನಿಖೆಯಲ್ಲಿ ಮೂಡಿದೆ. ಸದ್ಯ 133 ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳು ಸೆರೆಸಿಕ್ಕರೆ ರಾಜಕೀಯ ಕುತಂತ್ರ ಬಯಲಾಗಲಿದೆ.
ಪಾದರಾಯನಪುರ 1ನೇ ಕ್ರಾಸ್‌ನ ಸುಬಾನಿ ಮಸೀದಿಯಲ್ಲಿ 19 ವಿದೇಶಿ ತಬ್ಲಿಗಳು ತಂಗಿದ್ದರು. ಜತೆಗೆ ಕರೊನಾ ಸೋಂಕಿನ ಭೀತಿಯಿಂದ ಪಾದರಾಯನಪುರ ಮತ್ತು ಬಾಪೂಜಿನಗರ ಸೀಲ್‌ಡೌನ್ ಮಾಡಲಾಗಿತ್ತು. ಇದನ್ನೇ ಲಾಭ ಮಾಡಿಕೊಂಡ ರಾಜಕೀಯ ಮುಖಂಡರು, ತಮ್ಮ ಒಳ ದ್ವೇಷವನ್ನು ತೀರಿಸಿಕೊಳ್ಳಲು ಸ್ಥಳೀಯ ಜನರನ್ನು ಬಳಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸೀಲ್‌ಡೌನ್ ಬಳಿಕ ಜನರು ಏರಿಯಾದಿಂದ ಹೊರಗೆ ಹೋಗಲು ಸಾಧ್ಯವಾಗದೆ ಬಂಧಿಯಾದರು. ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ರಾಜಕೀಯ ಮುಖಂಡರ ಜತೆ ತೆರಳಿ ಸ್ಥಳೀಯರನ್ನು ವಿಶ್ವಾಸಕ್ಕೂ ತೆಗೆದುಕೊಂಡಿದ್ದರು. ಸಹಿಸದ ವಿರೋಧಿ ರಾಜಕೀಯ ಮುಖಂಡರು, ಗುಂಪು ಸೇರಿಸಿ ಪ್ರಚೋಧನೆ ನೀಡಿದರು. ಕರೊನಾ ಸೋಂಕು ನೆಪ ಮಾಡಿಕೊಂಡು ಮುಸ್ಲಿಂರನ್ನು ಟಾರ್ಗೆಟ್ ಮಾಡಿ ಸೀಲ್‌ಡೌನ್ ಮಾಡಿದ್ದಾರೆ. ಇಲ್ಲಿಂದ ಹೊರಗೆ ಹೋಗಬೇಕೆಂದರೆ ಪೊಲೀಸರು, ಆರೋಗ್ಯ ಅಧಿಕಾರಿ ಮತ್ತು ಪಾಲಿಕೆ ಸಿಬ್ಬಂದಿಯನ್ನು ಇಲ್ಲಿಂದ ಹೊರಗೆ ಕಳುಹಿಸುವಂತೆ ಕುಮ್ಮಕ್ಕು ನೀಡಿದ್ದರು ಎನ್ನಲಾಗುತ್ತಿದೆ.
ಆಕ್ರೋಶಗೊಂಡ ಕೆಲ ಗುಂಪುಗಳು ಏಪ್ರಿಲ್ 19ರ ರಾತ್ರಿ ಕ್ವಾರಂಟೈನ್‌ಗೆ ಬಂದಿದ್ದ ವೈದ್ಯರು, ಆಶಾ ಕಾರ್ಯಕರ್ತರು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಟೆಂಟ್ ಹೌಸ್, ಬ್ಯಾರಿಕೇಡ್, ಶೀಟ್‌ಗಳನ್ನು ಕಿತ್ತು ಹಾಕಿ ದಾಂಧಲೆ ನಡೆಸಿದರು. ಸ್ಥಳದಲ್ಲಿಯೇ ಇದ್ದ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ರ್ಇಾನ್ ಅಹ್ಮದ್, ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿ ಗಲಾಟೆ ನಡೆಯುತ್ತಿರುವ ಸಂಬಂಧ ಮಾಹಿತಿ ಕೊಡುತ್ತಾನೆ. ಸ್ಥಳಕ್ಕೆ ಹೆಚ್ಚಿನ ಪೊಲೀಸರು ಬರುವಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.
ಇರ್ಫಾನ್ ಅಹ್ಮದ್ ಮತ್ತು ರಾಜಕೀಯ ಮುಖಂಡರ ಜತೆ ಗುರುತಿಸಿಕೊಂಡಿರುವ ಕೆಲವರು ಸೆರೆ ಸಿಕ್ಕರೆ ಯಾರು ಯಾರ ಮೇಲಿನ ದ್ವೇಷಕ್ಕೆ ಗಲಭೆ ಮಾಡಿಸಿದ್ದಾರೆ. ಇದರಲ್ಲಿ ಯಾರ ಕುಮ್ಮಕ್ಕು ಇದೆ ಎಂಬುದು ತಿಳಿಯಲಿದೆ. ಇನ್ನೂ ಹಲವು ಪ್ರಮುಖ ಆರೋಪಿಗಳು ಸಿಗಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಂಧಲೆ ಕೇಸಿನಲ್ಲಿ 133 ಸೆರೆ: ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಒಟ್ಟಾರೆ 133 ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಮುಖ ಆರೋಪಿಗಳಾದ ರ್ಜುವಾ, ಕಬೀರ್, ವಾಜೀದ್ ಮತ್ತು ರ್ಇಾದ್ ಅಹ್ಮದ್ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಏಳು ಬಾಲಾಪರಾಧಿಗಳು ಸೇರಿದ್ದಾರೆ. ಪ್ರಮುಖ ಆರೋಪಿ ಇರ್ಫಾನ್ ಅಹ್ಮದ್ ತಲೆಮರೆಸಿಕೊಂಡಿದ್ದಾನೆ. ಇಡೀ ಕೃತ್ಯಕ್ಕೆ ಕಿಂಗ್‌ಪಿನ್ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಗಲಾಟೆ ಸಂಬಂಧ ಪೊಲೀಸರಿಗೆ ಮಾಹಿತಿ ಕೊಟ್ಟವೇ ಇದೀಗ ನಾಪತ್ತೆ ಆಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅವನಲ್ಲ ಅವಳೇ!: ಬಂಧಿತ ಫರ್ಜುವಾ, ಪೊಲೀಸರ ವಿಚಾರಣೆ ವೇಳೆ ತೃತೀಯ ಲಿಂಗಿ ಎಂದು ಹೇಳಿಕೊಂಡಿದ್ದಳು. ಆಕೆ ತೃತೀಯ ಲಿಂಗಿಯಲ್ಲ. ಫರ್ಜುವಾ ಹೇಳುತ್ತಿರುವುದು ಸುಳ್ಳು ಎಂದು ತೃತೀಯ ಲಿಂಗಿಗಳ ಸಂಘಟನೆ ಮುಖಂಡರು ಸ್ಪಷ್ಟಪಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಎ, ಎನ್‌ಆರ್‌ಸಿ ಮಾದರಿ ಕುತಂತ್ರ: ಈ ಹಿಂದೆಯೂ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ನಾಗರಿಕತ್ವ ಕಾಯ್ದೆ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆಗೆ ಜನರಿಗೆ ಪ್ರಚೋಧನೆ ಕೊಟ್ಟು ಕರೆತರುತ್ತಿದ್ದ ಮಾದರಿಯೇ ಒಳ ಸಂಚು ರೂಪಿಸಲಾಗಿದೆ. ಕರೊನಾ ಸೋಂಕು ನೆಪದಲ್ಲಿ ಮುಸ್ಲಿಂರನ್ನು ಟಾರ್ಗೆಟ್ ಮಾಡಿ ಸಿಎಎ, ಎನ್‌ಆರ್‌ಸಿಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಶಾ ಕಾರ್ಯಕರ್ತರು ಮತ್ತು ಪೊಲೀಸರನ್ನು ಇಲ್ಲಿಂದ ಓಡಿಸಿ ಎಂದು ಜನರಿಗೆ ಪ್ರಚೋದನೆ ನೀಡಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.