ನ್ಯೂಸ್

ವಿದೇಶ ಪ್ರವಾಸದಲ್ಲಿ ಪ್ರಧಾನಿ ಮೋದಿ: ಬರ್ಲಿನ್‌ನಲ್ಲಿ ಆತ್ಮೀಯ ಸ್ವಾಗತ

ನವದೆಹಲಿ: ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ ಜರ್ಮನಿಯ ಬರ್ಲಿನ್‌ಗೆ ತೆರಳಿದ್ದಾರೆ. ಬರ್ಲಿನ್‌ನಲ್ಲಿರುವ ಭಾರತೀಯರು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಯುರೋಪಿನ ದೇಶಗಳೊಂದಿಗೆ ಶಾಂತಿ ಸಮೃದ್ಧಿ, ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ ನರೇಂದ್ರ ಮೋದಿ ಅವರು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಮೋದಿ ಭೇಟಿ ಮಾಡಲಿದ್ದಾರೆ. ಇಂದು ಜರ್ಮನಿಯಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಪ್ರಧಾನಿ, ಕರೊನಾ ನಂತರ ಭಾರತ ಮತ್ತು ಜರ್ಮನಿ ನಡುವೆ ದೀರ್ಘಕಾಲದ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಯತ್ನಿಸಲಾಗುತ್ತೆ ಎಂದಿದ್ದಾರೆ.

ನಾಳೆ(ಮೇ 3- ಮೇ4) ಡೆನ್ಮಾರ್ಕ್‌ನ ಕೋಪನ್‌ಹೇಗನ್‌ಗೆ ನರೇಂದ್ರ ಮೋದಿ ಪ್ರಯಾಣ ಬೆಳೆಸಿದ್ದಾರೆ. ಭಾರತಕ್ಕೆ ವಾಪಸ್​ ಆಗುವ ವೇಳೆ ಫ್ರೆಂಚ್ ಅಧ್ಯಕ್ಷರನ್ನು ಮೋದಿ ಭೇಟಿ ಮಾಡಲಿದ್ದಾರೆ.