Plane : ಗುಜರಾತ್ನ ಅಹಮದಾಬಾದ್ ಏರ್ಪೋಟ್ ಬಳಿ ವಿಮಾನ ಪತನವಾಗಿದೆ ಎಂದು ಗುರುವಾರ ವರದಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಮಾನ ಪತನದ ದಟ್ಟಹೊಗೆ ಹೊರ ಬರುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ.
ವಿಮಾನ ಅಪಘಾತದ ನಂತರ, ಅಹಮದಾಬಾದ್‌ನ ಮೇಘಾನಿ ಪ್ರದೇಶದಲ್ಲಿ ಬೆಂಕಿಯ ದೊಡ್ಡ ಜ್ವಾಲೆಗಳು ಕಾಣಿಸಿಕೊಂಡಿವೆ. ದೂರದಿಂದ ಕಪ್ಪು ಹೊಗೆಯ ಮೋಡವು ಗೋಚರಿಸುತ್ತಿದೆ.
ಸುಮಾರು 242 ಪ್ರಯಾಣಿಕರು ಇದ್ದರು ಎಂದು ನಂಬಲಾಗಿದೆ. ತಾಂತ್ರಿಕದೋಷದಿಂದ ವಿಮಾನ ಪತನವಾಗದೆ ಎಂದು ಹೇಳಲಾಗುತ್ತಿದೆ. ಆದರೆ , ಸದ್ಯಕ್ಕೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. (ಏಜೆನ್ಸೀಸ್)