ಮನಿಲಾ: ಫಿಲಿಪೈನ್ನ ಮಾಜಿ ಅಧ್ಯಕ್ಷ ಬೆನಿಗ್ನೋ ಅಕ್ವಿನೊ(61) ನಿಧನರಾದರು. ಇವರಿಗೆ 61 ವರ್ಷ ವಯಸ್ಸಾಗಿತ್ತು.
ನೊಯ್ನಾಯ್ ಎಂದೇ ಪ್ರಸಿದ್ಧರಾಗಿದ್ದ ಬೆನಿಗ್ನೋ ಅಕ್ವಿನೊ ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ವಿಜೋನ್ ನಗರದ ಕ್ಯಾಪಿಟಲ್ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದರು.
ಅಕ್ವಿನೊ 2010ರಿಂದ 2016ರವರೆಗೆ ಫಿಲಿಪೆನ್ಸ್ನ ಅಧ್ಯಕ್ಷರಾಗಿದ್ದರು. ಇವರ ಅಧಿಕಾರಾವಧಿಯಲ್ಲಿ ಹಲವು ಹಗರಣ ನಡೆದಿತ್ತು. ಅಧಿಕಾರಾವಧಿ ಅಂತ್ಯಗೊಂಡ ಬಳಿಕ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.