ಸಾಂದರ್ಭಿಕ ಚಿತ್ರ 
ನ್ಯೂಸ್

ಆನ್ ಲೈನ್‌ನಲ್ಲಿ ವಿದೇಶಿ ತಳಿಯ ನಾಯಿ ಖರೀದಿಸಲು ಹೋದ ವ್ಯಕ್ತಿಗೆ 43 ಸಾವಿರ ರೂ. ಪಂಗನಾಮ!

ಬಿಡದಿ: ಆನ್ ಲೈನ್‌ನಲ್ಲಿ ವ್ಯಕ್ತಿಯೊಬ್ಬ ವಿದೇಶಿ ತಳಿಯ ನಾಯಿಯನ್ನು ಕೊಂಡುಕೊಳ್ಳಲು ಹೋಗಿ 43,000 ರೂಪಾಯಿ ಕಳೆದುಕೊಂಡಿರುವ ಘಟನೆ ನಗರದ ಬಾಳಪ್ಪ ಬಡಾವಣೆಯಲ್ಲಿ ನಡೆದಿದೆ.

ಬಡಾವಣೆಯ ನಿವಾಸಿ ನಿತೇಶ್ ಕುವಾರ್ ಹಣ ಕಳೆದುಕೊಂಡವರು. ಈ-ಮೇಲ್ ಮುಖಾಂತರ ಪರಿಚಯವಾದ ಅಪರಿಚಿತ ವ್ಯಕ್ತಿ ಜರ್ಮನ್ ಮೂಲದ ನಾಯಿಯನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿದ್ದಾನೆ. ತದನಂತರ ನಾಯಿಯನ್ನು ತರಿಸಲು ಟ್ರಾನ್ಸ್‌ಪೋರ್ಟ್ ವೆಚ್ಚ, ನಾಯಿಗೆ ಇನ್ಸೂರೆನ್ಸ್ ಹಾಗೂ ಬೋನು ವೆಚ್ಚವೆಂದು 12,500 ರೂಪಾಯಿ ಹಾಗೂ ಇತರ ಸರ್ವೀಸ್ ಚಾರ್ಜ್ ಸೇರಿ 30,500 ರೂಪಾಯಿಯನ್ನು ಡಿ.6ರಂದು ನೆಟ್ ಬ್ಯಾಂಕಿಂಗ್ ಮಾಡುವಂತೆ ಸೂಚಿಸಿದ್ದಾನೆ. ಆತನ ಮಾತಿನಂತೆ ನಿತೇಶ್ ಕುಮಾರ್ ನಡೆದುಕೊಂಡಿದ್ದಾನೆ.

ಹಣವನ್ನು ನೆಟ್​ ಬ್ಯಾಕಿಂಗ್ ಮಾಡಿದ ನಂತರ, ನಾಯಿ ಯಾವಾಗ ಬರುತ್ತದೆ ಎಂದು ಮಧ್ಯವರ್ತಿ ನೀಡಿದ ನಂಬರ್​ಗೆ ಕರೆ ಮಾಡಿದ್ದಾನೆ ನಿತೇಶ್ ಕುಮಾರ್. ಈ ವೇಳೆ ಸರಿಯಾದಿ ಸ್ಪಂದನೆ ಸಿಕ್ಕದೇ ಇದ್ದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ನಾಯಿ ಕೊಡುತ್ತೇನೆ ಎಂದು ಹೇಳಿದ್ದ ವ್ಯಕ್ತಿ ನಕಲಿ ನಂಬರ್ ನೀಡಿ ವಂಚಿಸಿದ್ದಾನೆ. ಸದ್ಯ ರಾಮನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.