ನ್ಯೂಸ್

ಆಕಳಿಗೆ ನೀರು ಕುಡಿಸಲು ಕೆರೆಗೆ ಹೋದವ ವಾಪಸ್​ ಬರಲಿಲ್ಲ! ಮೊಸಳೆ ಹೊತ್ತೊಯ್ತೇ ಅಥವಾ ಕೊಲೆಯಾದನೇ...

arunakunigal

ರಾಯಚೂರು: ಆಕಳಿಗೆ ನೀರು ಕುಡಿಸಲೆಂದು ಲಿಂಗಸುಗೂರು ತಾಲೂಕಿನ ಬೋಗಾಪುರ ಕೆರೆಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಅವರ ಕಾಲಿನ ಚಪ್ಪಲಿ, ಪ್ಯಾಂಟ್​ ಅನುಮಾನಾಸ್ಪದವಾಗಿ ಕೆರೆ ದಡದಲ್ಲಿ ತೇಲುತ್ತಿದೆ.

ಬೊಮ್ಮನಾಳ ತಾಂಡಾದ ಭೀಮಣ್ಣ(36) ನಾಪತ್ತೆಯಾದವ. ಭಾನುವಾರ ಸಂಜೆ ಭೀಮಣ್ಣ ಆಕಳಿಗೆ ನೀರು ಕುಡಿಸಲು ಕೆರೆಗೆ ಹೋಗಿದ್ದ. ಆದರೆ ವಾಪಸ್​ ಮನೆಗೆ ಬಂದಿಲ್ಲ.

ನಿನ್ನೆ ಸಂಜೆಯಿಂದ ಊರ ಸುತ್ತಮುತ್ತ, ಕೆರೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಕೆರೆಯಲ್ಲಿ 7 ರಿಂದ 8 ಮೊಸಳೆ ಇದೆ. ಮೊಸಳೆಯೇ ಭೀಮಣ್ಣನನ್ನು ಹೊತ್ತೋಯ್ದು ತಿಂದಿರಬೇಕು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಭೀಮಣ್ಣನನ್ನು ಕೆರೆಯಲ್ಲಿ ಮೀನು ಹಿಡಿಯುವವರೇ ಕೊಲೆ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದೆ. ಇತ್ತ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಭೀಮಣ್ಣನ ಬಗ್ಗೆ ಇದುವರೆಗೂ ಯಾವುದೇ ಕುರುಹು ಸಿಕ್ಕಿಲ್ಲ.