ಚಿಕ್ಕೋಡಿ: ಒಂದೂವರೆ ಕೆಜಿ ಬಂಗಾರ ನೀಡಿದ್ದ ಸುಳಿವಿನ ಮೇಲೆಯೇ ಕೊಲೆ ಆರೋಪಿ ಬಂಧನವಾದ ಅಚ್ಚರಿಯ ಘಟನೆ ಇದು.
ಬಂಗಾರಕ್ಕಾಗಿ ಗೆಳೆಯನನ್ನೇ ಕೊಂದ ವ್ಯಕ್ತಿ ಇದೀಗ ಪೊಲೀಸರಿಂದ ಬಂಧಿತನಾಗಿದ್ದಾನೆ. ಸಾಗರ್ ಪಾಟೀಲ್ (30) ಮೃತ ದುರ್ದೈವಿ. ನವನಾಥ ಬಾಬರ್ (25) ಕೊಲೆಗಾರ. ಇವರಿಬ್ಬರೂ ಉತ್ತರ ಪ್ರದೇಶದ ಮಯಗಲ್ ಸರಾಯ್ ಎಂಬಲ್ಲಿ ಚಿನ್ನ ಕರಗಿಸಿ ಗಟ್ಟಿ ಬಂಗಾರ ಮಾಡುವ ಅಂಗಡಿ ಇಟ್ಟಿದ್ದರು.
ಇವರಿಬ್ಬರೂ ಅಲ್ಲಿಂದ ಊರಿಗೆ ಬರುವವರಿದ್ದರು. ಆದರೆ ಬಂಗಾರದ ಆಸೆಗೆ ಬಿದ್ದ ನವನಾಥ್, ಸಾಗರ್ ಬ್ಯಾಗಿನಲ್ಲಿ ಬಂಗಾರ ಇದೆ. ಅದನ್ನು ಅಪಹರಿಸಬೇಕು ಎಂಬ ಆಸೆಗೆ ಬಿದ್ದು ದಾರಿ ಮಧ್ಯೆಯೆ ಆತನನ್ನು ಕೊಂದು, ಶವವನ್ನು ಕೃಷ್ಣಾ ನದಿಗೆ ಬಿಸಾಕಿದ್ದ. ಆದರೆ ಬಂಗಾರ ಸಾಗರ್ ಬ್ಯಾಗಿನಲ್ಲಿರಲಿಲ್ಲ. ಬದಲಿಗೆ ಜೇಬಿನಲ್ಲಿ ಹಾಗೇ ಉಳಿದಿತ್ತು. ಜೇಬಿನಲ್ಲಿ ಇರವ ವಿಚಾರ ಗೊತ್ತಿಲ್ಲದೆ ನವನಾಥ್ ಶವವನ್ನು ಹಾಗೇ ಎಸೆದಿದ್ದ. ಇದನ್ನೂ ಓದಿ: ಇವತ್ತು 500 ಕಿಲೋ, ನಾಳೆ 600 ಕಿಲೋ… ಭಾರ ಹೊರುವುದರಲ್ಲಿ ಆನೆಗೆ ಆನೆಯೇ ಸಾಟಿ!
ಅಕ್ಟೋಬರ್ 4ರಂದು ಅಥಣಿ ತಾಲೂಕಿನ ಅವರಖೋಡ ಬಳಿ ಕೃಷ್ಣಾ ನದಿಯಲ್ಲಿ ಸಾಗರ್ ಮೃತ ದೇಹ ಪತ್ತೆಯಾಗಿತ್ತು. ಆತನ ಜೇಬಿನಲ್ಲಿ ಭದ್ರವಾಗಿ ಇಟ್ಟಿದ್ದ ಬಂಗಾರವೂ ಹಾಗೇ ಇತ್ತು. ಅದರ ಜಾಡು ಹಿಡಿದು ತನಿಖೆ ನಡೆಸಿದ್ದ ಪೊಲೀಸರು ನವನಾಥ್ನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)