ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ನಗರಸಭಾಧ್ಯಕ್ಷ ಮಾಲಿಕ್ ಪಾಷ, ಸದಸ್ಯೆ ಸಮೀನಾ ಇಮ್ರಾನ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಪ್ರಾಂಶುಪಾಲ ಡಾ.ಬಿ.ಸಿ.ಸುರೇಶ್ ಇದ್ದರು. 
ನ್ಯೂಸ್

ಸತತ ಅಧ್ಯಯನದಿಂದ ಪರಿಪೂರ್ಣ ವ್ಯಕ್ತಿತ್ವ ಗಳಿಕೆ ಸಾಧ್ಯ

ಎಂ.ರವಿ

ಹುಣಸೂರು: ಸತತ ಅಧ್ಯಯನದ ಹವ್ಯಾಸದ ಮೂಲಕ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿತ್ವ ಗಳಿಸಲು ಸಾಧ್ಯವೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.

ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೆಡ್‌ಕ್ರಾಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಓದುವುದೊಂದೇ ಕೆಲಸವಾಗಿರುತ್ತದೆ. ನಿಜಜೀವನಕ್ಕೆ ಪ್ರವೇಶಿಸಿದ ಮೇಲೆ ಓದಲು ಸಾಧ್ಯವಿಲ್ಲ. ಸತತ ಅಧ್ಯಯನ, ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸದಿಂದ ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳುವುದಲ್ಲದೆ ನೂತನ ಆವಿಷ್ಕಾರಗಳನ್ನು ಆಲೋಚನೆಯೂ ಮೂಡಬಲ್ಲದು. ಆ ಮೂಲಕ ನೀವು ಸಮಾಜಕ್ಕೆ ಕೊಡುಗೆ ನೀಡಿದಂತಾಗಲಿದೆ. ಸಕಾರಾತ್ಮಕ ಆಲೋಚನೆಯಿಂದ ಮಾತ್ರ ಸಾಧನೆ ಸಾಧ್ಯವೆಂದರು.

ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಡಾ.ಸಿ.ಗುರುಸಿದ್ದಯ್ಯ ಮಾತನಾಡಿ, ನಿಮ್ಮ ಸಾಮರ್ಥ್ಯವನ್ನು ನೀವು ಸ್ಪಷ್ಟವಾಗಿ ಅರಿತುಕೊಳ್ಳಿರಿ. ವಿಷಯದ ಆಯ್ಕೆ ನಿಮ್ಮ ನಿರ್ಧಾರವಾಗಲಿ. ಮೊಬೈಲ್ ಬಳಕೆ ಅನಿವಾರ್ಯವಾದಾಗ ಮಾತ್ರ ಇರಲಿ. ಸರ್ಕಾರಾತ್ಮಕ ಚಿಂತನೆಗಳು ನಿಮ್ಮದಾಗಲಿ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನ ಮತ್ತು ವ್ಯಾಯಾಮ ಅಭ್ಯಾಸ ಮಾಡಿರಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಿ.ಸಿ.ಸುರೇಶ್ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನಲ್ಲಿ ಒಟ್ಟು 1297 ವಿದ್ಯಾರ್ಥಿಗಳಿದ್ದು, ಕಾಲೇಜಿಗೆ ಅಗತ್ಯವಿರುವ ಹೆಚ್ಚುವರಿ ಕೊಠಡಿ ಸೇರಿದಂತೆ ಸೌಲಭ್ಯಗಳನ್ನು ಒದಗಿಸಲು ಶಾಸಕ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ,. ಸಾಂಸ್ಕೃತಿಕ ಸಮಿತಿ ಸಂಚಾಲಕ ಆರ್.ಕುಮಾರ್, ಕ್ರೀಡಾ ಸಂಚಾಲಕ ಸಿ.ಕುಮಾರ್, ವಿವಿಧ ಘಟಕಗಳ ಸಂಚಾಲಕರಾದ ಭೋಜರಾಜ, ಡಾ.ಎಂ.ವಿ.ಜಗದೀಶ್, ಡಾ.ಎಚ್.ಕೆ.ಮಂಜು, ಡಾ.ಗೀತಾಂಜಲಿ, ಎಂ.ಎಚ್.ಸುನಿಲ್, ವಿ.ಸಂತೋಷ್, ಹರ್ಷವರ್ಧನ್ ರಮೇಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಿ.ಕೆ.ದೀಕ್ಷಿತಾ, ಉಪಾಧ್ಯಕ್ಷರಾದ ಮಂಜು, ರಕ್ಷಿತಾ, ಕಾರ್ಯದರ್ಶಿಗಳಾದ ಜೀವನ್, ನಯನಾ, ಸಹ ಕಾರ್ಯದರ್ಶಿಗಳಾದ ಪ್ರೀತಮ್, ಅಂಕಿತಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ಸಂಭ್ರಮಿಸಿದರು.